ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿ

Congress-kollegala-A.R.KrishnnaMooruthy
Published on

ಚಾಮರಾಜನಗರ: ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಜಯವಾಣಿ ದಿನಪತ್ರಿಕೆಯ ವರದಿಗಳು ಪ್ರತಿಧ್ವನಿಸಿದವು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪತ್ರಿಕೆಯನ್ನು ಪ್ರದರ್ಶಿಸಿ ‘ರಣಬಿಸಿಲಿನಲ್ಲಿ ಬೇಯುತ್ತಿರುವ ಬುದ್ಧಿಮಾಂದ್ಯರು’ ವಿಶೇಷ ವರದಿ ಪ್ರಸ್ತಾಪಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಬುದ್ಧಿಮಾಂದ್ಯರ ಮೇಲೆ ಕಾಳಜಿವಹಿಸಬೇಕೆಂದು ಡಿಎಚ್‌ಒ ಡಾ.ಚಿದಂಬರ್‌ಗೆ ಸೂಚನೆ ನೀಡಿದರು.

ಇದಕ್ಕೂ ಮುನ್ನ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡದ ಕುರಿತು ವಿಜಯವಾಣಿ ಗಮನಸೆಳೆದಿದ್ದ ‘ಕೆಲಸ ಕೊಟ್ರು, ಸಂಬಳ ಮಾತ್ರ ಕೊಡ್ತಿಲ್ಲ’ ವರದಿ ಪ್ರಸ್ತಾಪಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಳ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಒಪ್ಪಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net