

ಚಾಮರಾಜನಗರ: ಸತ್ತೇಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯರು ಕೇಂದ್ರ ಸ್ಥಾನದಲ್ಲಿರುವುದಿಲ್ಲ. ನಿತ್ಯವೂ ಕೆಲಸ ಮುಗಿಸಿ ತೆರಳುತ್ತಾರೆ ಎಂದು ಕೊಳ್ಳೇಗಾಲದ ಸತ್ತೇಗಾಲದ ಶಶಿ ಹೇಳಿದ್ದಾರೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಲ್ಲಿ ಎಷ್ಟರಮಟ್ಟಿಗೆ ಆರೋಗ್ಯ ಸೇವೆ ದೊರೆಯುತ್ತಿದೆ ಎನ್ನುವ ಕುರಿತು ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ರಜೆ ದಿನ, ಶನಿವಾರ ಹಾಗೂ ಭಾನುವಾರ ನರ್ಸ್‌ಗಳನ್ನು ಬಿಟ್ಟರೆ ವ್ಯೆದ್ಯರು ಸಿಗುವುದಿಲ್ಲ. ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ನೀಡಬೇಕು. ಈವರೆಗೆ ಎಷ್ಟು ಹೆರಿಗೆ ಮಾಡಲಾಗಿದೆ ಎಂಬ ವಿವರ ಕೊಡಬೇಕು. ರೋಗಿಗಳನ್ನು ತಪಾಸಣೆ ಮಾಡಿದ ಬಳಿಕ ಅಗತ್ಯವಿರುವ ಎಲ್ಲ ರೀತಿಯ ಮೆಡಿಸನ್ ನೀಡಬೇಕು. ಬಡವರು ಹಣವಿಲ್ಲವೆಂದು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಇಲ್ಲೂ ಔಷಧ ಖರೀಸಲು ಹೊರಗೆ ಚೀಟಿ ಬರೆದರೆ ಬಡವರು ಏನು ಮಾಡಬೇಕು. ಇನ್ನು ಈ ಆಸ್ಪತ್ರೆ ಸುತ್ತಮುತ್ತ ಮಲ, ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಕೆಲವರು ಮದ್ಯದ ಅಡ್ಡೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.