ದುಬಾರಿ ಬೆಲೆ ಕೊಟ್ಟು ಔಷಧ ಖರೀದಿ

venkatesh
Published on

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂದು ತೆರಕಣಾಂಬಿ ಗ್ರಾಮದ ವೆಂಕಟೇಶ್ ದೂರಿದ್ದಾರೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಲ್ಲಿ ಎಷ್ಟರಮಟ್ಟಿಗೆ ಆರೋಗ್ಯ ಸೇವೆ ದೊರೆಯುತ್ತಿದೆ ಎನ್ನುವ ಕುರಿತು ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಕೌಂಟರ್‌ನಲ್ಲಿ ಚೀಟಿ ಪಡೆದು ವೈದ್ಯರ ಭೇಟಿ ಮಾಡಲು ಮಧ್ಯಾಹ್ನವಾದರೂ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ವೈದ್ಯರು ಹೆಚ್ಚಿನ ತಪಾಸಣೆ ಮಾಡಲು ತಿಳಿಸಿದರೆ ಮಧ್ಯಾಹ್ನದ ಊಟಕ್ಕೆಂದು ಸಿಬ್ಬಂದಿ ತೆರಳುವ ಕಾರಣ ಪ್ರಯೋಗಾಲಯಗಳನ್ನು ಬಂದ್ ಮಾಡಲಾಗುತ್ತದೆ. ಇದರಿಂದಾಗಿ ಬಡರೋಗಿಗಳು ಖಾಸಗಿ ಪ್ರಯೋಗಾಲಯಗಳಲ್ಲಿ ದುಬಾರಿ ಬೆಲೆತೆತ್ತು ಪರೀಕ್ಷೆ ಮಾಡಿಸುವಂತಾಗಿದೆ. ಅಲ್ಲದೆ ಆಸ್ಪತ್ರೆ ಆವರಣದಲ್ಲಿ ಜೆನರಿಕ್ ಮಳಿಗೆ ಇದ್ದರೂ ರೋಗಿಗಳಿಗೆ ಬೇಕಾದ ಔಷಧ ದೊರಕದೆ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ದುಬಾರಿ ಬೆಲೆ ಕೊಟ್ಟು ಖರೀದಿಸುವಂತಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net