

ಚಾಮರಾಜನಗರ: ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾಶಿ ಯಾತ್ರಾ ಉತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ನಗರದ ಹೃದಯ ಭಾಗಹದಲ್ಲಿರುವ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರಸ್ವಾಮಿಯ ಕಲ್ಯಾಣ ಮಹೋತ್ಸವದ ಅಂಗವಾಗಿ ದಿನನಿತ್ಯವೂ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಮಂಗಳವಾರ ಮುಂಜಾನೆಯೇ ಉತ್ಸವ ಮೂರ್ತಿಗೆ ಹಲವು ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಮತ್ತು ಆಗಮಿಕರಾದ ದರ್ಶನ್, ಅನಿಲ್ ಕುಮಾರ ದೀಕ್ಷಿತ್, ರಾಮಕೃಷ್ಣ ಭಾರದ್ವಾಜ್, ಸೂರ್ಯನಾರಾಯಣ ಅವಧಾನಿ, ಕಾರ್ಯನಿರ್ವಹಣ ಅಧಿಕಾರಿಗಳಾದ ಸಿ.ಮಹೇಶ್, ಅಭಿವೃದ್ಧಿ ಮಂಡಳಿಯ ಮುಖ್ಯಸ್ಥ ವೆಂಕಟನಾಗಪ್ಪ ಶೆಟ್ಟಿ ಬಾಬು, ದೇವಾಲಯದ ಸಿಬ್ಬಂದಿ ವರ್ಗ, ಉತ್ಸವ ಸಮಿತಿ ಸದಸ್ಯರು, ಭಕ್ತಾದಿಗಳು ಭಾಗವಹಿಸಿದ್ದರು.