ಅಂಗವಿಕಲರಿಂದ ಅರ್ಜಿ ಆಹ್ವಾನ

Application
Published on

ಚಾಮರಾಜನಗರ: ಕೊಳ್ಳೇಗಾಲ ನಗರಸಭೆಯು 2023-24ನೇ ಸಾಲಿನ ಶೇ.24.10, ಶೇ.7.25 ಮತ್ತು ಶೇ.5ರ ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗದ ವಿದ್ಯಾರ್ಥಿಗಳು ಹಾಗೂ ಅಂಗವಿಕಲರಿಗೆ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗದ ಬಿ.ಇ, ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸಹಾಯಧನ ಮತ್ತು ವಸತಿ ಯೋಜನೆಯಡಿ ಸಹಾಯಧನ ಹಾಗೂ ಶೇ.5ರ ಯೋಜನೆಯಡಿಯಲ್ಲಿ ವಿಶೇಷ ಚೇತನರಿಗೆ ವ್ಹೀಲ್ ಛೇರ್, ಎಸ್.ಎಸ್.ಎಲ್.ಸಿ, ಪಿಯು.ಸಿ, ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ಅಂಗವಿಕಲರಿಗೆ ಪ್ರೋತ್ಸಾಹಧನ, ಸ್ವಯಂ ಉದ್ಯೋಗ ಪ್ರಾರಂಭಿಸುವವರಿಗೆ ಬ್ಯಾಂಕಿನಿಂದ ಸಾಲ ಮಂಜೂರಾತಿ ಸಹಾಯಧನ ಅಂಗವಿಕಲರ ಅವಲಂಬಿತರಿಗೆ ಪೋಷಣಾ ಭತ್ಯೆ ನೀಡಲಾಗುತ್ತದೆ.

ಅರ್ಜಿಯೊಂದಿಗೆ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ, ಬಿ.ಪಿ.ಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಪ್ರಸಕ್ತ ಸಾಲಿನಲ್ಲಿ ಚಾಲ್ತಿಯಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಲ್ಯಾಪ್ ಟಾಪ್ ಅರ್ಜಿಗೆ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಪತ್ರ, ಕಳೆದ ಸಾಲಿನ ಅಂಕಪಟ್ಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಲ್ಯಾಪ್‌ಟಾಪ್ ಸಹಾಯಧನ ಪಡೆದಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ ಲಗತ್ತಿಸಬೇಕು.

ಅರ್ಜಿಯನ್ನು ನಗರಸಭೆ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದು. ಅಗತ್ಯ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯನ್ನು ಜೂನ್ 29 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯ ಸಂಬಂಧಪಟ್ಟ ಶಾಖೆಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net