

ಹನೂರು: ಮನೆಗಳಲ್ಲಿ ವಾರದಲ್ಲಿ ಒಂದು ದಿನ ಒಣ ದಿನವಾಗಿ ಆಚರಿಸುವುದರ ಮೂಲಕ ಡೆಂೆ ಜ್ವರ ತಡೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಲ್ಲಾ ರೋಗವಾಹಕ ಆಶಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜೇಶ್‌ಕುಮಾರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಂೆ ತಡೆಗಟ್ಟುವಿಕೆ ಕುರಿತು ಶುಕ್ರವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಡೆಂೆ ಜ್ವರವು ಸೊಳ್ಳೆಯಿಂದ ಹರಡುತ್ತದೆ. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದ್ದರಿಂದ ಸೊಳ್ಳೆಯ ಸಾಂದ್ರತೆ ಕಡಿಮೆ ಮಾಡುವುದರ ಮೂಲಕ ರೋಗವನ್ನು ನಿಯಂತ್ರಣಕ್ಕೆ ತರಬಹುದು. ಹಾಗಾಗಿ ಸೊಳ್ಳೆಗಳು ಉತ್ಪತ್ತಿಯಾಗುವ ನೀರು ಸಂಗ್ರಹಣೆಯ ತೊಟ್ಟಿ, ಬಿಸಾಡಿದ ತೆಂಗಿನ ಚಿಪ್ಪು, ಒಡೆದ ಬಾಟಲಿ ಹಾಗೂ ಟೈರ್‌ಗಳನ್ನು ತೆರವುಗೊಳಿಸಬೇಕು. ವಾರದಲ್ಲಿ ಒಂದು ದಿನ ಸಂಗ್ರಹಿಸಿರುವ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಮೂಲಕ ನೈರ್ಮಲ್ಯ ಕಾಪಾಡುವಂತೆ ಸಲಹೆ ನೀಡಬೇಕು ಎಂದರು.
ಚರಂಡಿ ಹೂಳು ಹಾಗೂ ಬೀದಿಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಕಾಲಕಾಲಕ್ಕೆ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಬೇಕು. ಇದರಿಂದ ಡೆಂೆ ಜ್ವರ ಬಾರದಂತೆ ತಡೆಗಟ್ಟಬಹುದು. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಡೆಂೆ ಹಾಗೂ ಕೀಟಗಳಿಂದ ತಗಲುವ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವುದ ಸಂಬಂಧ ಜಿಪಂ ಸಿಇಒ ಅವರ ಸೂಚನೆ ಮೇರೆಗೆ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಪಿಡಿಒಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಗ್ರಾಮಗಳಲ್ಲಿ ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.
ಬಳಿಕ ವಿಭಾಗೀಯ ಕೀಟ ಶಾಸ್ತ್ರಜ್ಞೆ ಡಾ.ರೇಖಾ ಅವರು ಸೊಳ್ಳೆಗಳಿಂದ ರೋಗ ಹರಡುವ ವಿಧಾನ ಹಾಗೂ ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಸೊಳ್ಳೆಗಳು ಉತ್ಪತ್ತಿಯಾಗುವ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ದಯಾನಂದ, ಭಾಸ್ಕರ್, ದ್ವಾರಕೀಶ್, ಪಿಡಿಒಗಳಾದ ನಂಜುಂಡಸ್ವಾಮಿ, ಮಹದೇವಪ್ರಭು, ರಘುನಾಥ್, ಮಾದೇಶ್, ರಾಮು, ದೊರೆಯಾ ಇನ್ನಿತರರು ಇದ್ದರು.