ಡೇರಿ ಅಧ್ಯಕ್ಷನಾದ ಚಾಮುಲ್ ನಿರ್ದೇಶಕ

047
Published on

ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಹಾಗು ಉಪಾಧ್ಯಕ್ಷರಾಗಿ ಪದ್ಮರಾಜು ಬುಧವಾರ ಆಯ್ಕೆಯಾದರು.

ಗ್ರಾಮದ ಡೇರಿ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅಯ್ಕೆ ಚುನಾವಣೆಯ ನಡೆಯಿತು. ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚು ಗೆಲುವು ಸಾಧಿಸಿದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್. ಬಸವರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮರಾಜು ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಎಸ್. ಸುಭಾಷಿಣಿ ಅಧಿಕೃವಾಗಿ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಪುನೀತ್ ಕಾರ್ಯನಿರ್ವಹಿಸಿದರು.

ಸಭೆಯಲ್ಲಿ ನೂತನ ನಿರ್ದೇಶಕರಾದ ಶಿವರಾಜು, ಸಂಪತ್ತುಕುಮಾರ್, ಮಹದೇವಸ್ವಾಮಿ ಎನ್, ಮಹದೇವಸ್ವಾಮಿ ಬಿ.ಎನ್., ನಾಗರಾಜು ವಿ.ಬಿ., ಕೃಷ್ಣೇಗೌಡ, ಬಂಗಾರು, ರೇಣುಕಾ, ಜಯಮ್ಮ ಉಪಸ್ಥಿತರಿದ್ದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಡೇರಿ ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ಲಕ್ಷ್ಣಣಯ್ಯ, ಮಂಜುಳ ಅಂಕನಶೆಟ್ಟಿಪುರ, ವಿ.ಪಿ. ನಾಗರಾಜು, ಗ್ರಾಪಂ ಸದಸ್ಯರಾದ ಸೋಮಣ್ಣ, ಅಶೋಕ್, ಎಚ್.ಆರ್.ಸ್ವಾಮಿ, ಕೃಷ್ಣಮೂರ್ತಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಗಿರಿಮಲ್ಲು, ಮುಖಂಡರಾದ ಗೌಡಿಕೆ ನಂಜುಡಸ್ವಾಮಿ, ಬಸವಣ್ಣ, ಪುಟ್ಟಸ್ವಾಮಿ, ನಟೇಶ್, ನಾಗೇಂದ್ರಸ್ವಾಮಿ, ಛೇರ‌್ಮನ್ ಕುಮಾರ್, ಕೃಷ್ಣ, ಸಿಬ್ಬಂದಿಗಳಾದ ಮನು, ಮನೋಹರ, ಸುನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net