ಹಳೇ ವಿದ್ಯಾರ್ಥಿಗಳಿಂದ ಪುಸ್ತಕ, ಲೇಖನ ಸಾಮಗ್ರಿ ವಿತರಣೆ

20-KGLPHOTO-2,,,,,
Published on

ಕೊಳ್ಳೇಗಾಲ : ಪಟ್ಟಣದ ಹೊಸ ಹಂಪಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುವಾರ ಶಾಲೆಯ ಹಳೇ ವಿದ್ಯಾರ್ಥಿಗಳು ಪುಸಕ್ತ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.

ಶಾಲೆ ಹಳೇ ವಿದ್ಯಾರ್ಥಿ ಹಾಗೂ ಯುವ ಮುಖಂಡ ಮಹೇಶ್ ಮಾತನಾಡಿ, ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದರೆ ನಮಗೆ ಹೆಮ್ಮೆ. ಇಲ್ಲಿ ಕಲಿತ ಹಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾವೂ ಇಲ್ಲಿಯೇ ಓದಿದವರಾಗಿದ್ದು, ನಮ್ಮ ಶಾಲೆಗೆ ಹಲವು ವರ್ಷಗಳ ಇತಿಹಾಸವಿದೆ ಎಂದರು.

ಸರ್ಕಾರಿ ಶಾಲೆಗಳು ಮತ್ತಷ್ಟೂ ಅಭಿವೃದ್ಧಿಗೊಳ್ಳಬೇಕು. ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಶ್ರಮಿಸಬೇಕಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸರ್ಕಾರಿ ಶಾಲೆಯೇ ಆಧಾರವಾಗಿದೆ. ಹೊಸ ಹಂಪಾಪುರ ಶಾಲೆಗೆ ಶಿಕ್ಷಕರ ಕೊರತೆ ಇದೆ. ಶಿಕ್ಷಣ ಇಲಾಖೆ ಅಗತ್ಯವಿರುವ ಶಿಕ್ಷಕರ ನಿಯೋಜನೆ ಮಾಡುವಂತೆ ಮನವಿ ಮಾಡಿದರು.
ಇಂದು ನಾವು ಓದಿದ ಶಾಲೆಯ ಮಕ್ಕಳಿಗೆ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳು ಸೇರಿ ಮಕ್ಕಳಿಗೆ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣೆ ಮಾಡಿದ್ದೇವೆ. ಇದಕ್ಕೆ ನಮ್ಮ ಸ್ನೇಹಿತರಾದ ಉದ್ಯಮಿ ಮಂಜುನಾಥ್ ಅವರೂ ಸಹಕಾರ ನೀಡಿದ್ದಾರೆ ಎಂದರು.

ಮುಖ್ಯಶಿಕ್ಷಕಿ ಸಾವಿತ್ರಮ್ಮ ಮಾತನಾಡಿ, ನಮ್ಮೂರಿನ ಶಾಲೆಯ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಸಹಾಯ ಮಾಡುವ ಉದ್ದೇಶದಿಂದ ಹಳೇ ವಿದ್ಯಾರ್ಥಿಗಳು ಪುಸ್ತಕ, ಇತರ ಓದಿನ ಪರಿಕರಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳು ಇದನ್ನು ಬಳಸಿಕೊಂಡು ಚೆನ್ನಾಗಿ ಓದಿ ಸಾಧನೆ ಮಾಡಬೇಕು. ನಂತರ, ತಾವೂ ಮುಂದೆ ಬಡ ಮಕ್ಕಳ ಓದಿಗೆ ಸಹಾಯ ಮಾಡಬೇಕೆಂದು ಕಿವಿಮಾತು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಪರಿಮಳಾ, ಸಹ ಶಿಕ್ಷಕಿ ಡಿ.ಶೀಲಾ, ಪಂಕಜಾ, ಉಷಾ, ಎಸ್‌ಡಿಎಂಸಿ ಸದಸ್ಯರಾದ ಮಂಗಳಮ್ಮ, ಗೀತಾ, ದೀಪಾ, ಕುಮಾರ್, ಶಾಲೆ ಹಳೇ ವಿದ್ಯಾರ್ಥಿಗಳಾದ ಗ್ರಾ.ಪಂ ಸದಸ್ಯ ಶಿವಕುಮಾರ್, ರವಿಕುಮಾರ್, ಮಾದು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net