ಜೂ.20ರಂದು ನೇರ ಸಂದರ್ಶನ

job fair
Published on

ಚಾಮರಾಜನಗರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಜಿಲ್ಲಾ ಕೌಶಾಲ್ಯಾಭಿವೃದ್ಧಿ ಕಚೇರಿ ವತಿಯಿಂದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ನೇರ ಸಂದರ್ಶನವನ್ನು ಜೂ.20ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸಂದರ್ಶನದಲ್ಲಿ ಆದಿತ್ಯಾ ಬಿರ್ಲಾ ಗ್ರೂಪ್ ಅಂಡ್ ಬಿರ್ಲಾ ಪೇಂಟ್ಸ್ ಹಾಗೂ ಪ್ಯಾಲೆಸ್ ಟೊಯೊಟಾ ಕಂಪನಿಗಳು ಭಾಗವಹಿಸಲಿವೆ. ಆದಿತ್ಯ ಬಿರ್ಲಾ ಗ್ರೂಪ್ ಅಂಡ್ ಬಿರ್ಲಾ ಪೇಂಟ್ಸ್ ಕಂಪನಿಗೆ ಡಿಪ್ಲೊಮಾ ಎಂಜಿನಿಯರ್ ಟ್ರೈನೀ ಹುದ್ದೆಗೆ ಕೆಮಿಕಲ್, ಪೆಟ್ರೊಕೆಮಿಕಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ 2024ನೇ ಬ್ಯಾಚ್‌ನವರಾಗಿರಬೇಕು. ಡಿಪ್ಲೊಮಾ ಎಂಜಿನಿಯರ್ ಪ್ರೊಡಕ್ಷನ್ ಹುದ್ದೆಗೆ ಕೆಮಿಕಲ್, ಮೆಕಾನಿಕಲ್ ಡಿಪ್ರೋಮಾ ವಿದ್ಯಾರ್ಹತೆ ಹೊಂದಿದ್ದು, 2ರಿಂದ 4 ವರ್ಷ ವೃತ್ತಿ ಅನುಭವ ಹೊಂದಿರಬೇಕು.

ಚಾಮರಾಜನಗರ ಪ್ಯಾಲೆಸ್ ಟೊಯೊಟಾ ಕಂಪನಿಯ ಸೇಲ್ಸ್ ಆಫೀಸರ್ಸ್ ಹುದ್ದೆಗೆ ಪಿಯುಸಿ, ಐಟಿಐ ಡಿಪ್ರೋಮಾ ಮತ್ತು ಯಾವುದೇ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ ಆಗಿರುವ ವೃತ್ತಿ ಅನುಭವ ಹೊಂದಿರುವ ಅಥವಾ ಹೊಂದಿರದ ಅಭ್ಯರ್ಥಿಗಳು ಭಾಗವಹಿಸಬಹುದು. ಬ್ಯಾಂಕ್ ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ, ಐಟಿಐ ಮತ್ತು ಯಾವುದೇ ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ ಆಗಿರುವ ವೃತ್ತಿ ಅನುಭವ ಹೊಂದಿರುವ ಅಥವಾ ಹೊಂದಿರದ ಅಭ್ಯರ್ಥಿಗಳು ಭಾಗವಹಿಸಬಹುದು.

ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರ, ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಉದ್ಯೋಗಾಧಿಕಾರಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಅಥವಾ ದೂ.ಸಂ 08226-224430 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net