ಜೂ. 23ರಿಂದ 28ರವರೆಗೆ ಗಿರಿಜಾ ಕಲ್ಯಾಣ ಮಹೋತ್ಸವ

Chamarajeswara
Published on

ಚಾಮರಾಜನಗರ: ನಗರದ ಶ್ರೀಚಾಮರಾಜೇಶ್ವರ ದೇವಾಲಯದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಜೂ.23ರಿಂದ 28ರವರೆಗೆ ಶ್ರೀಕೆಂಪನಂಜಾಂಬಾ ಅಮ್ಮನವರ ಸಮೇತ ಶ್ರೀಚಾಮರಾಜೇಶ್ವರ ಸ್ವಾಮಿಯವರಿಗೆ ಬೆಳೆಯತಕ್ಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮವು ನಡೆಯಲಿದೆ.

23ರಂದು ಸಂಜೆ 6 ಗಂಟೆಗೆ ಅನುಜ್ಞಾಪೂರ್ವಕ ಎಣ್ಣೇ ಅರಿಶಿಣ ಪ್ರಧಾನ ನಂತರ ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ, 24ರಂದು ತೃತೀಯ ಪ್ರಾತಃಕಾಲ 10 ಗಂಟೆಗೆ ಅಂಕುರಾರ್ಪಣ ಪೂರ್ವಕ ಕನ್ನಡಿ ಕಲಶ ತರುವುದು, ನಂತರ ಮಂಗಳಸ್ನಾನ ಬೆಳೆದು ನಾಂದಿ ನಡೆದು ಗ್ರಹಯಜ್ಞ ಪ್ರಾರಂಭವಾಗಿ ಸಾಯಂಕಾಲ 5ಗಂಟೆಗೆ ಕಾಶಿಯಾತ್ರೆ ಮಹೋತ್ಸವವು ಬೆಳೆಯುತ್ತದೆ. ಆನಂತರ ರಾತ್ರಿ 7.30 ರಿಂದ 8.14 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಅಕ್ಷತಾರೋಪಣೆ, ಧಾರಾಮಹೋತ್ಸವ, ಪ್ರಧಾನಹೋಮ, ಮಹಾಮಂಗಳಾರತಿ ಜರುಗಲಿದೆ.

25ರಂದು ಚತುರ್ಥಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಉಯ್ಯಲೋತ್ಸವ, 26ರಂದು ಪಂಚಮಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಪಾಕಿನಿ ಮಹೋತ್ಸವ, 27ರಂದು ಷಷ್ಠಿ ಪ್ರಾತಃಕಾಲ ಔಪಾಸನೆ ಉರುಟಣೆ ಉಯ್ಯಲೋತ್ಸವವು ರಾತ್ರಿ ಔಪಾಸನೆ ಶೇಷಹೋಮ, ನಾಕಬಲಿ, ಹೊಳಲು ಸುತ್ತುವುದು ಗಜಾರೋಹಣ ಪೂಜೆ, ಗೃಹಪ್ರವೇಶ ಮಹೋತ್ಸವ ನಡೆಯಲಿದೆ. 28ರಂದು ಸಪ್ತಮಿ ಪ್ರಾತಃಕಾಲ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ ಅನಂತರ ಸ್ತಂಭ ಪೂಜಾ ರಾತ್ರಿ ಪುಷ್ಪಾಂದೋಳಿಕೋತ್ಸವ, ಶಯನೋತ್ಸವವೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net