ಪಂಚಾಯಿತಿ ವತಿಯಿಂದ ಅರಿವು ಅಗತ್ಯ

Kaliprasad
Published on

ಚಾಮರಾಜನಗರ: ಜನರು ಸ್ವಚ್ಛ ಭಾರತ ಯೋಜನೆಯ ಸಹಾಯಧನ ಬಳಸಿಕೊಂಡು ಶೌಚಗೃಹ ನಿರ್ಮಿಸಿ ಉಪಯೋಗಿಸುತ್ತಿದ್ದಾರೆ. ಆದರೆ ಇಂದಿಗೂ ಅನೇಕರು ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿದ್ದಾರೆ ಎಂದು ಯಳಂದೂರಿನ ಕಾಳಿ ಪ್ರಸಾದ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಬಯಲಿನಲ್ಲಿ ಬಹಿರ್ದೆಸೆಗೆ ತೆರಳುವವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸ್ಥಳೀಯ ಪಂಚಾಯಿತಿಗಳು ಹೆಚ್ಚಾಗಿ ಮಾಡಬೇಕು. ಪಂಚಾಯಿತಿ ವತಿಯಿಂದ ಶೌಚಗೃಹಗಳನ್ನು ನಿರ್ಮಿಸುವುದರ ಜತೆಗೆ ಅದನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net