

ಚಾಮರಾಜನಗರ: ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ಮನೆಗೂ ಶೌಚಗೃಹ ಕಟ್ಟಿಸಿ ಕೊಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳು ಕಟ್ಟಿಕೊಂಡ ಶೌಚಗೃಹಗಳನ್ನು ಗೋಡೌನ್ ಮಾಡಿಕೊಂಡು, ಬಳಸಿಕೊಳ್ಳದೆ ಬಯಲು ಬಹಿರ್ದೆಸೆಗೆ ತೆರಳುತ್ತಾರೆ ಎಂದು ಕೊಳ್ಳೇಗಾಲ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಪುಟ್ಟಮ್ಮ ದೂರಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಕೆಲವು ಗ್ರಾಪಂಗಳಲ್ಲಿ ಹಲವರಿಗೆ ಶೌಚಗೃಹಗಳ ಹಣ ಬಿಲ್ಗಳು ಪಾವತಿಯಾಗಿಲ್ಲ. ಯುವಕರು, ಹೆಣ್ಣು ಮಕ್ಕಳು ಮನೆಯಲ್ಲಿರುವ ಶೌಚಗೃಹವನ್ನು ಬಳಸಿಕೊಳ್ಳಬೇಕೆಂಬ ಅರಿವು ಹೆಚ್ಚಿನ ರೀತಿ ಆಗಬೇಕಿದೆ. ಇದರಿಂದ ಮಾನಹಾನಿಯಂತಹ ಪ್ರಕರಣಗಳನ್ನು ತಡೆಗಟ್ಟಬಹುದು. ಜಿಲ್ಲಾಡಳಿತ ಈ ಯೋಜನೆ ಅನುಷ್ಠಾನಗೊಳ್ಳಲು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.