ಸ್ವಚ್ಛತೆ ಇಲ್ಲದ ಶೌಚಗೃಹಗಳು

Narayan
Published on

ಚಾಮರಾಜನಗರ: ಯಳಂದೂರು ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಸಾಮೂಹಿಕ ಶೌಚಗೃಹಗಳು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಎಂದು ಗಂಗವಾಡಿಯ ನಾರಾಯಣ್ ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಶೌಚಗೃಹಗಳ ನಿರ್ವಹಣೆ, ಸ್ವಚ್ಛತೆ ಇವುಗಳ ಬಗ್ಗೆ ಅಧಿಕಾರಿಗಳು ಕ್ರಮವಹಿಸುವುದಿಲ್ಲ. ದೂರು ನೀಡಿದ ಮೇಲೆ ಇವುಗಳ ಬಗ್ಗೆ ಪರಿಶೀಲಿಸುತ್ತಾರೆ. ಇದರಿಂದ ಶೌಚಗೃಹ ನಿರ್ವಹಣೆಯಲ್ಲಿ ಅಧಿಕಾರಿಗಳು ಮಹತ್ವದ ಪಾತ್ರ ನಿರ್ವಹಿಸುವುದಿಲ್ಲ. ಇದರಿಂದ ಸಾಮೂಹಿಕ ಶೌಚಗೃಹಗಳು ಅಶುಚಿತ್ವದಿಂದ ಕೂಡಿರುತ್ತದೆ. ಹೀಗಾಗಿ ಜನರು ಬರಲು ಹಿಂದೇಟು ಹಾಕುತ್ತಿದ್ದು, ಬಯಲು ಬಹಿರ್ದೆಸೆಗೆ ಮುಂದಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net