ಸಾಮೂಹಿಕ ಶೌಚಗೃಹ ನಿರ್ಮಿಸಿ

Rangegowda
Published on

ಚಾಮರಾಜನಗರ: ಪ್ರತಿ ಕುಟುಂಬವೂ ಶೌಚಗೃಹವನ್ನು ಹೊಂದಬೇಕು ಎನ್ನುವುದು ಸರ್ಕಾರದ ಆಶಯ. ಆದರೆ ಹನೂರು ತಾಲೂಕಿನ ಕಾಡಂಚಿನ ಗ್ರಾಮದ ಗಿರಿಜನರ ಬಹುತೇಕ ಕುಟುಂಬಗಳಲ್ಲಿ ಶೌಚಗೃಹವಿಲ್ಲ ಎಂದು ಹನೂರಿನ ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಕೆಲವು ಕುಟುಂಬಗಳಲ್ಲಿ ನಿವೇಶನದ ಕೊರತೆಯಿಂದ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಆಯಾ ಗ್ರಾಮದಲ್ಲಿ ಲಭ್ಯವಿರುವೆಡೆ ನಿವೇಶನವನ್ನು ಗುರುತಿಸಿ, ಸಾಮೂಹಿಕ ಶೌಚಗೃಹ ನಿರ್ಮಿಸಿಕೊಡಲು ಮುಂದಾಗಬೇಕು. ಆದರೆ ಈ ಕೆಲಸವಾಗುತ್ತಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net