ಶೌಚಗೃಹ ನಿರ್ವಹಣೆ ಮಾಡುತ್ತಿಲ್ಲ

Sudeep
Published on

ಚಾಮರಾಜನಗರ: ಮಹಿಳೆಯರಿಗಿಂತಲೂ ಹೆಚ್ಚಾಗಿ ಪುರುಷರು ಮುಂಜಾನೆ ಬಯಲು ಹಾಗೂ ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಹೋಗುವುದು ಹೆಚ್ಚಾಗಿದೆ ಎಂದು ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಯುವ ಮುಖಂಡ ಸುದೀಪ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಕೆರೆ-ಕಟ್ಟೆಗಳು, ಕಾಲುವೆಗಳಲ್ಲಿ ನೀರು ಹರಿಯುವಾಗ ಇದು ಸಾಮಾನ್ಯ. ಕೆಲವು ಗ್ರಾಮಗಳಲ್ಲಿ ಇಂದಿಗೂ ಸಾಕಷ್ಟು ಬಡ ಮತ್ತು ಮಧ್ಯಮವರ್ಗದ ಜನರು ಸೂಕ್ತವಾದ ಜಾಗವಿಲ್ಲದೆ, ಪಂಚಾಯಿತಿಗಳಲ್ಲಿ ಹಣ ಬಿಡುಗಡೆಯಾಗದೆ ಶೌಚಗೃಹಗಳನ್ನು ನಿರ್ಮಾಣ ಮಾಡಿಕೊಂಡಿಲ್ಲ. ಪಂಚಾಯಿತಿ ನಿರ್ಮಾಣ ಮಾಡಿರುವ ಸಮುದಾಯ ಶೌಚಗೃಹಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಜನರು ಬಯಲನ್ನೇ ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net