ನಿರಂತರ ಜಾಗೃತಿ ಅಗತ್ಯ

Hema
Published on

ಚಾಮರಾಜನಗರ: ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಚ್ಚಿನ ಮಹಿಳೆಯರು ಮನೆಯಲ್ಲಿ ಶೌಚಗೃಹ ಇದ್ದರೂ ಬಯಲಿನಲ್ಲಿ ಬಹಿರ್ದೆಸೆಗೆ ಹೋಗುವುದನ್ನು ನಿಲ್ಲಿಸಿಲ್ಲ ಎಂದು ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೇಮಾ ದೂರಿದರು.

ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆ ನಿಲ್ಲದ ಇರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಮನೆಯ ಸಮೀಪವೇ ಇರುವ ಶೌಚಗೃಹಕ್ಕೆ ಹೋದರೆ ಗಲೀಜಾಗುತ್ತದೆ, ರೋಗಗಳು ಹರಡುತ್ತದೆ ಹಾಗೂ ಇನ್ನಿತರ ಮೂಢನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಪುರುಷರು ಮಹಿಳೆಯರಿಗಿಂತಲೂ ಹೆಚ್ಚಾಗಿ ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಶೌಚಗೃಹ ನಿರ್ಮಿಸಿಕೊಟ್ಟಿರುವ ಗ್ರಾಪಂ ಆಡಳಿತ, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ಎಡವಿದ್ದಾರೆ. ಬೀದಿನಾಟಕ, ಮನೆ ಮನೆ ಪ್ರಚಾರ ಹಾಗೂ ಇತರ ಕಾರ್ಯಕ್ರಮಗಳ ಮೂಲಕ ನಿರಂತರ ಅರಿವು ಮೂಡಿಸಿದರೆ ಮಾತ್ರ ಜಿಲ್ಲೆ ಸಂಪೂರ್ಣ ಬಯಲು ಬಹಿರ್ದೆಸೆಮುಕ್ತ ಮಾಡಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net