

ಚಾಮರಾಜನಗರ: ಬಕ್ರೀದ್ ಹಬ್ಬದ ಪ್ರಯುಕ್ತ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ವತಿಯಿಂದ ಮುಸ್ಲಿಂ ಮುಖಂಡರನ್ನು ಸನ್ಮಾನಿಸಿ ಶುಭಾಶಯ ಕೋರಲಾಯಿತು.
ನಗರದ 11ನೇ ವಾರ್ಡ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ನಿಜಧ್ವನಿ ಸೇನಾ ಸಮಿತಿ ವತಿಯಿಂದ ಎಂ.ಡಿ.ಕಿಫಾಯತ್, ಸಿಟಿಜನ್ ಫಾರೂಕ್, ಸೈಯದ್ ಮಜರ್, ಕೃಷಿಕ ಅಲೀಂಉಲ್ಲಾಗೆ ಕನ್ನಡಶಲ್ಯ ಹಾಕಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸುವ ಮೂಲಕ ಹಬ್ಬದ ಶುಭಾಶಯ ಕೋರಲಾಯಿತು.
ಸಮಿತಿ ಅಧ್ಯಕ್ಷ ನಿಜಧ್ವನಿ ಗೋವಿಂದರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಘಟನೆ ವತಿಯಿಂದ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ಮುಖಂಡರನ್ನು ಸನ್ಮಾನಿಸಿ ಶುಭಾಶಯ ಕೋರುವ ಮೂಲಕ ಹಿಂದು-ಮುಸ್ಲಿಂ ಭಾವೈಕ್ಯತೆ ಬೆಸೆಯುವ ಕೆಲಸ ಮಾಡಲಾಗುತ್ತಿದೆ ಎಂದರು. ಮರಿಯಾಲದಹುಂಡಿ ಕುಮಾರ್, ಚಂದ್ರಕುಮಾರ್, ಸುಚಿತ್ರಾ, ಮುತ್ತುಲಕ್ಷ್ಮೀ, ಮಂಗಳಮ್ಮ, ಭಾಗ್ಯಮ್ಮ, ಲಕ್ಷ್ಮೀ ಇತರರು ಹಾಜರಿದ್ದರು.