

ಚಾಮರಾಜನಗರ: ನಗರದಲ್ಲಿರುವ ಶ್ರೀ ಕಾಳಿಕಾಂಬ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಕಾಳಿಕಾಂಬ ದೇವಿ ಸಿಂಹರೂಡಿ ಶ್ರೀ ಚಾಮುಂಡೇಶ್ವರಿ ದೇವಿಯ ಆಲಂಕಾರ ಮಾಡಿ ವಿಜೃಂಭಣೆಯಿಂದ ವಿಶೇಷ ಪೂಜೆ ನೇರವೇರಿಸಲಾಯಿತು.
ಪ್ರಾತಃಕಾಲ ಶ್ರೀ ಕಾಳಿಕಾಂಬ ಸಮೇತ ಶ್ರೀಕಮಠೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪಂಚಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜೆಗಳು ಶ್ರೀರಾಮಶೇಷ ಪಾಠಶಾಲೆಯ ಪ್ರಾಚಾರ್ಯ ಪ್ರದೀಪ್‌ಕುಮಾರ್ ದಿಕ್ಷೀತ್ ನೆರವೇರಿಸಿದರು. ವಧರ್ಂತಿ ಹಿನ್ನೆಲೆಯಲ್ಲಿ ವಿಶೇಷವಾಗಿ ಕಾಳಿಕಾಂಬ ದೇವಿಗ ಚಾಮುಂಡಿ ಅಂಲಕಾರವನ್ನು ಮಾಡುವ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಚಾಮುಂಡಿ ತಾಯಿ ವರ್ಧಂತೋತ್ಸವ ಅಂಗವಾಗಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಸುಮಂಗಲಿಯರು ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರು. ಅಲ್ಲದೇ ಮಹಿಳೆಯರು ಇಷ್ಟಾರ್ಥ ಸಿದ್ದಿಗಾಗಿ ನಿಂಬೆ ಹಣ್ಣಿನ ದೀಪವನ್ನು ಹಚ್ಚಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿಕೊಂಡರು. ಕಾಳಿಕಾಂಬ ಟ್ರಸ್ಟ್ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.