ಸ್ವಂತ ಉದ್ದಿಮೆಗೆ ಅರ್ಜಿ ಆಹ್ವಾನ

Bussiness
Published on

ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಡೇ-ನಲ್ಮ್ ಯೋಜನೆಯ ಎಸ್.ಇ.ಪಿ ಉಪಘಟಕದಡಿ 2024-25ನೇ ಸಾಲಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಲು ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಶೇ. 7ಕ್ಕಿಂತ ಹೆಚ್ಚಿನ ಬಡ್ಡಿ ಸಹಾಯಧನದೊಂದಿಗೆ ಬ್ಯಾಂಕಿನ ಮೂಲಕ ಸಾಲ ನೀಡಲಾಗುವುದು.

ಅರ್ಜಿಯನ್ನು ಗುಂಡ್ಲುಪೇಟೆ ಪುರಸಭೆ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಎರಡು ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕ, ಉದ್ದಿಮೆ ಪರವಾನಗಿ ಮತ್ತು 2 ಲಕ್ಷ ರೂ.ಗಳ ಯೋಜನಾ ವರದಿಯನ್ನು ಲಗತ್ತಿಸಿ ಜೂ.24ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಲ್ಯಾಣ ಶಾಖೆಯ ಮೊ.ಸಂ 7204442550 ಅನ್ನು ಸಂಪರ್ಕಿಸುವಂತೆ ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net