

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ ಒಂದನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಜೂ.15ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಲಳ್ಳಿ, ಕಮರಹಳ್ಳಿ, ಬೊಗ್ಗನಪುರ, ಮರಳಾಪುರ, ರಂಗನಾಥಪುರ, ತೊರವಳ್ಳಿ, ನಿಟ್ರೆ, ಹಿರಿಕಾಟಿ, ಚಿಕ್ಕಾಟಿ, ಅರೆಪುರ, ತೊಂಡವಾಡಿ ಹಾಗೂ ಬೇಗೂರು, ವಾಟರ್ ಸಪ್ಲೈ, ಹೆಗ್ಗಡಹಳ್ಳಿ, ಮಂಚಳ್ಳಿ ಎನ್.ಜೆ.ವೈ, ಶೆಟ್ಟಹಳ್ಳಿ, ದೇಸಿಪುರ, ಇಂಡಸ್ಟ್ರಿಯಲ್, ಹೊರೆಯಾಲ ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ನಿಗಮದ ಜತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.