

ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ನೂತನ ಅಧ್ಯಕ್ಷ ಎಂ.ರಾಮಚಂದ್ರ ಅವರನ್ನು ನಾಯಕ ಜನಾಂಗದ ಮುಖಂಡರು ಸನ್ಮಾನಿಸಿದರು.
ನಗರದ ಸೋಮಣ್ಣ ಲೇಔಟ್‌ನಲ್ಲಿರುವ ಕಚೇರಿಯಲ್ಲಿ ಬುಧವಾರ ಸಮುದಾಯದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ರಾಮಚಂದ್ರ, ಮೈಸೂರು ಮತ್ತು ಚಾನರಾಜನಗರ ಜಿಲ್ಲೆಯ ನಾಯಕ ಸಮುದಾಯವನ್ನು ಸಂಘಟಿಸಿ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಅಭಿವೃದ್ದಿ ಪಡಿಸುವ ಚಿಂತನೆ ಹೊಂದಲಾಗಿದೆ ಎಂದರು. ಕೊಳ್ಳೇಗಾಲ ನಾಯಕ ಜನಾಂಗದ ಮುಖಂಡರಾದ ಬಾಲರಾಜ್, ಶಂಕರನಾಯಕ, ಎಚ್.ಎಂ.ಮಹದೇವನಾಯಕ, ಮಾರುತಿ, ಮಲ್ಲುಸ್ವಾಮಿ, ಕಿಚ್ಚ ರಾಜಶೇಖರ್, ಗುಂಡ್ಲುಪೇಟೆ ನಾಯಕ ಜನಾಂಗದ ಮುಖಂಡರಾದ ಹಂಗಳ ವೃಷಬೇಂದ್ರ, ವಿಶ್ವನಾಥ್, ಕೃಷ್ಣ ರಂಗಸ್ವಾಮಿ,ರವಿ, ಕಗ್ಗಳ ರವಿ ಹಾಜರಿದ್ದರು.