ಮುಂದುವರಿದ ಚಿರತೆ ಸೆರೆ ಕಾರ್ಯಾಚರಣೆ

13-kglphoto-6,
Published on

ಕೊಳ್ಳೇಗಾಲ: ಗುಂಡಾಲ್ ಅರಣ್ಯ ಪ್ರದೇಶದಂಚಿನ ಪ್ರದೇಶದಲ್ಲಿ ಕಳೆದ 7 ದಿನಗಳಿಂದ ಮೂರು ವರ್ಷದ ಹೆಣ್ಣು ಚಿರತೆಯ ಉಪಟಳ ಹೆಚ್ಚಾಗಿರುವುದರಿಂದ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಗುರುವಾರವೂ ಮುಂದುವರೆಯಿತು.

ಆರ್‌ಎಫ್‌ಒ ವಾಸು ನೇತೃತ್ವದಲ್ಲಿ ಮೈಸೂರಿನ ಚಿರತೆ ಟಾಸ್ಕ್‌ಫೋರ್ಸ್ ತಂಡ 45 ಅರಣ್ಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುಂಡಾಲ್ ಸೋಲಾರ್ ಪ್ರದೇಶದಲ್ಲಿ ಚಿರತೆ ಇರುವುದು ಅದರ ಕತ್ತಿನಲ್ಲಿರುವ ರೇಡಿಯೋ ಕಾಲರ್‌ನಿಂದ ಅರಣ್ಯಾಧಿಕಾರಿಗಳಿಗೆ ತಿಳಿದು ಬಂದಿದೆ. ಚಿರತೆಯು ಓಡಾಡುವ ಕ್ಷಣ ಕ್ಷಣದ ಲೋಕೇಷನ್ ಬೆನ್ನತ್ತಿದ್ದಾರೆ. ಚಿರತೆ ಚಲನವನ ಕಂಡು ಹಿಡಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತುಮಕೂರಿನಿಂದ ತಂದಿರುವ ಬೋನನ್ನು ಚಿರತೆ ಸೆರೆಗೆ ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net