ವಿದ್ಯುತ್ ತಗುಲಿ ಹಸು ಸಾವು

11 HANUR 2
Published on

ಹನೂರು: ಪಟ್ಟಣದ ಲೊಕ್ಕನಹಳ್ಳಿಗೆ ತೆರಳುವ ರಸ್ತೆ ಬದಿಯ ಜಮೀನಿನಲ್ಲಿ ಮಂಗಳವಾರ ವಿದ್ಯುತ್ ತಂತಿ ಸ್ಪರ್ಶದಿಂದ ಹಸು ಮೃತಪಟ್ಟಿದೆ.

ಪಟ್ಟಣದ ಪುಟ್ಟವೆಂಕಟಯ್ಯ ಎಂಬುವರು ಮಧ್ಯಾಹ್ನ ಹಸುವನ್ನು ಮೇಯಿಸಲು ಲೊಕ್ಕನಹಳ್ಳಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬಸ್ ಶಬ್ದಕ್ಕೆ ಗಾಬರಿಗೊಂಡ ಹಸು ರಂಗಸ್ವಾಮಿ ನಾಯ್ಡು ಎಂಬುವವರ ಜಮೀನಿನತ್ತ ಓಡಿದೆ. ಜಮೀನಿನ ಮಾಲೀಕರು ಬೆಳೆ ರಕ್ಷಣೆಗಾಗಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಹಸು ಸ್ಥಳದಲ್ಲೇ ಮೃತಪಟ್ಟಿತು. ಜಮೀನಿನ ಮಾಲೀಕರಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಪುಟ್ಟ ವೆಂಕಟಯ್ಯ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net