ಚಾಮರಾಜನಗರ: ತಾಲೂಕಿನ ಕುದೇರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ ವಿಭಾಗದಿಂದ ಪ್ರೊ. ಸಿ.ವಿ. ಮಹಾದೇವಯ್ಯ ಸ್ಮರಣಾರ್ಥ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಕೆ. ಚಾಮರಾಜು ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ವಿಷಯ ಕುರಿತು ಉಪನ್ಯಾಸ ನೀಡಿದರು. ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧವಿದೆ. ಪರಿಸರವನ್ನು ಸ್ವಚ್ಛವಾಗಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಪರಿಸರ ಕಾಪಾಡಿಕೊಳ್ಳುವ ಕಾಳಜಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಥಿಯೋಡರ್ ಲೂಥರ್ ಮಾತನಾಡಿ, ಪರಿಸರ ಮನುಷ್ಯನ ಪ್ರಜ್ಞೆಯನ್ನು ರೂಪಿಸುತ್ತದೆ. ಆದ್ದರಿಂದ ಸುತ್ತಮುತ್ತಲ ಉತ್ತಮ ಪರಿಸರವನ್ನು ರೂಪಿಸಿಕೊಳ್ಳುವುದು ಎಲ್ಲರ ಹೊಣೆಗಾರಿಕೆಯಾಗಿದೆೆ ಎಂದು ಹೇಳಿದರು. ಪರಿಸರ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಗಿಡಗಳನ್ನು ನೆಡಲಾಯಿತು. ಇದೇ ವೇಳೆ 2023-24ನೇ ಸಾಲಿನಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ದ್ವಿತೀಯ ಬಿ.ಎ ವಿದ್ಯಾರ್ಥಿನಿಯರಾದ ಪದ್ಮಾವತಿ, ಪವಿತ್ರಾ, ಶಶಿಕಲಾ ಅವರಿಗೆ ಪ್ರೊ. ಸಿ.ವಿ. ಮಹಾದೇವಯ್ಯ ಹೆಸರಿನಲ್ಲಿ ನಗದು ಬಹುಮಾನ ನೀಡಲಾಯಿತು. ಅರ್ಥಶಾಸ ವಿಭಾಗದ ಮುಖ್ಯಸ್ಥ ಪ್ರೊ. ವಿ.ವಾಣಿ, ಅಧ್ಯಾಪಕರಾದ ಪ್ರೊ. ಎನ್.ಜೆ. ಶಶಿಕಲಾ, ಪ್ರೊ. ಮಮತಾ, ಪ್ರೊ. ಮಧುಸೂದನ್, ಪ್ರೊ. ಶ್ರೀನಿವಾಸ್, ಪ್ರೊ.ಮಹೇಂದ್ರ, ಮಲ್ಲಿಕಾರ್ಜುನಸ್ವಾಮಿ, ಬಸವಣ್ಣ, ಮನೋಜ್ ಕುಮಾರ್, ಕಾಲೇಜಿನ ಅಧಿಕ್ಷಕ ಕೆ.ಸಿ.ರವಿ ಉಪಸ್ಥಿತರಿದ್ದರು.