ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರದ ಜಮೀನೊಂದರಲ್ಲಿ ಹಾವು ಕಚ್ಚಿ ಒಂದೂವರೆ ವರ್ಷದ ಕರು ಸೋಮವಾರ ಮೃತಪಟ್ಟಿದೆ.
ಬಡಾವಣೆಯ ನಿವಾಸಿ ಬಸವರಾಜಪ್ಪ ಎಂಬುವರಿಗೆ ಸೇರಿದ ಕರು ಎಂದಿನಂತೆ ಜಮೀನಿನ ಕಡೆಗೆ ತೆರಳಿತ್ತು. ಬಹಳ ಸಮಯವಾದರೂ ಕರು ಹಿಂತಿರುಗದ ಕಾರಣ ಬಸವರಾಜಪ್ಪ ಹುಡುಕುತ್ತ ಜಮೀನಿನ ಕಡೆ ತೆರಳಿದ್ದಾರೆ. ಈ ವೇಳೆ ಕರು ಸತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪಶು ವೈದ್ಯರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪಶು ವೈದ್ಯರು ತಪಾಸಣೆ ಮಾಡಿದಾಗ ಕರುವಿಗೆ ಹಾವು ಕಚ್ಚಿರುವುದು ದೃಢಪಟ್ಟಿದೆ. ಕರುವನ್ನು ಬಸವರಾಜಪ್ಪ ತಮ್ಮ ಜಮೀನಿನಲ್ಲಿ ಹೂತುಹಾಕಿದರು.