ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಮುಖ್ಯರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಸಾರಿಗೆ ಬಸ್ ಹರಿದ ಪರಿಣಾಮ 2 ಕುರಿಗಳು ಮೃತಪಟ್ಟಿವೆ.
ಅಪಘಾತದಲ್ಲಿ ಮೃತಪಟ್ಟ ಕುರಿಗಳು ಸರಗೂರು ಗ್ರಾಮದ ಮಲ್ಲಜಮ್ಮ ಅವರದ್ದಾಗಿವೆ. ಕುರಿ ಮೇಯಿಸಲು ಮಲ್ಲಜಮ್ಮ ತೆರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಹರಿದಿದ್ದು, ಅಪಘಾತಕ್ಕೀಡಾದ 3 ಕುರಿಗಳ ಪೈಕಿ 2 ಕುರಿಗಳು ಮೃತಪಟ್ಟಿವೆ. ಮತ್ತೊಂದು ಕುರಿಗೆ ಕಾಲು ಮುರಿದಿದೆ. ಸದ್ಯ ಗಾಯಗೊಂಡಿದ್ದ ಕುರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.