

ಚಾಮರಾಜನಗರ : ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆ ಹಾಗೂ ರೈತರು ಗುಣಮಟ್ಟದ ಹಾಲನ್ನು ಒದಗಿಸುವ ಸಲುವಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್ ಭರವಸೆ ನೀಡಿದರು.
ತಾಲೂಕಿನ ಕುದೇರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಸಭೆ ಹಾಗೂ ನಿವೃತ್ತ ಸಂಘದ ಕಾರ್ಯದರ್ಶಿ ಶಿವನಾಗಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಸಂಘದಲ್ಲಿ 550-600 ಲೀ. ಹಾಲು ಶೇಖರಣೆ ಆಗುತ್ತಿದೆ. ಹಿಂದಿನಿಂದಲೂ ಸಂಘವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದೀರಿ. ಮುಂದಿನ ದಿನಗಳಲ್ಲೂ ಸಂಘ ಅತ್ಯುತ್ತಮವಾಗಿ ನಡೆದುಕೊಂಡು ಹೋಗಲು ಹಾಗೂ ಅದರ ಬೆಳವಣಿಗೆಗೆ ಅನುಕೂಲವಾಗುವಂತೆ ರೈತರಿಗೆ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಎನ್.ಣಿರಾಜಮೂರ್ತಿ ಮಾತನಾಡಿ, 39 ವರ್ಷಗಳಿಂದ ದೇಮಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ನಿವೃತ್ತ ಹೊಂದಿದ ಶಿವನಾಗಪ್ಪ ಅವರು, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕುದೇರು ಹಾಲು ಉತ್ಪಾದಕರ ಸಹಕಾರ ಸಂಘದ ಉಳಿವಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಶೇಷಣ್ಣ , ಮಾಜಿ ಅಧ್ಯಕ್ಷ ಕೆ.ಎನ್.ಸಿದ್ದೇಶ್, ನಿರ್ದೇಶಕ ಬಂಗಾರಗಿರಿ, ಮಹಾದೇವಯ್ಯ, ಕೆ.ಪಿ.ಉಮೇಶ್, ನಾಗೇಗೌಡ, ನಟರಾಜು, ಗೋವಿಂದಶೆಟ್ಟಿ, ಜಯಮ್ಮ, ಚಾಮಮ್ಮ, ಹಾಲು ಉತ್ಪಾದಕ ಬಸವಣ್ಣ, ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಹಾಲು ಪರೀಕ್ಷಕ ಮಲ್ಲು ಹಾಗೂ ಕುದೇರು, ತೆಂಕಲಮೋಳೆ, ಬಡಗಲಮೋಳೆ ಗ್ರಾಮಸ್ಥರು ಹಾಜರಿದ್ದರು.