

ಚಾಮರಾಜನಗರ: ಬೆಂಗಳೂರಿನಿಂದ ಕೊಳ್ಳೇಗಾಲ ಮಾರ್ಗವಾಗಿ ಚಾಮರಾಜನಗರಕ್ಕೆ ರೈಲು ಸಂಪರ್ಕ ನೀಡುವ ಚಿಂತನೆ ಈ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಇತ್ತು. ಈ ನಿಟ್ಟಿನಲ್ಲಿ ಕೆಲವು ಪ್ರಕ್ರಿಯೆ ನಡೆದಿದ್ದವು ಎಂದು ಕೊಳ್ಳೇಗಾಲ ಸಾಹಿತಿ ದೊಡ್ಡಲಿಂಗೇಗೌಡ ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ನೂತನ ಸಂಸದ ಸುನೀಲ್‌ಬೋಸ್ ಮೇಲೆ ಜನರು ಇಟ್ಟಿರುವ ನಿರೀಕ್ಷೆಗಳ ಕುರಿತು ಅವರು ವಿಜಯವಾಣಿಯೊಂದಿಗೆ ಮಾತನಾಡಿದರು. ನೂತನ ಸಂಸದ ಸುನೀಲ್ ಬೋಸ್ ಕೊಳ್ಳೇಗಾಲಕ್ಕೆ ರೈಲು ಸೇವೆ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದರೆ ಇದು ಬಹಳ ದೊಡ್ಡ ಸಾಧನೆ ಆಗುತ್ತದೆ. ಇದ್ದರಿಂದ ಕೊಳ್ಳೇಗಾಲ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಎಂದರು.