ಕೆರೆಗಳಿಗೆ ನೀರು ತುಂಬಿಸಲಿ

H.M.Mahesh
Published on

ಚಾಮರಾಜನಗರ: ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಗುಂಡ್ಲುಪೇಟೆಯ ಹಂಗಳದ ಎಚ್.ಎಂ.ಮಹೇಶ್ ಹೇಳಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ನೂತನ ಸಂಸದ ಸುನೀಲ್‌ಬೋಸ್ ಮೇಲೆ ಜನರು ಇಟ್ಟಿರುವ ನಿರೀಕ್ಷೆಗಳ ಕುರಿತು ಅವರು ವಿಜಯವಾಣಿಯೊಂದಿಗೆ ಮಾತನಾಡಿದರು. ಗುಂಡ್ಲುಪೇಟೆಯ ರಸ್ತೆಗಳು ಹಾಳಾಗಿವೆ. ಕೇಂದ್ರ ಸರ್ಕಾರದ ಅನುದಾನದಲ್ಲಾದರೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಎಲ್ಲ ಗ್ರಾಮಗಳಿಗೂ ವಿಸ್ತರಣೆ ಮಾಡಿ ಕೃಷಿಗೆ ಅನುಕೂಲ ಮಾಡಿಕೊಡಬೇಕು. ಗುಂಡ್ಲುಪೇಟೆ ಕ್ಷೇತ್ರದ ರೈತರಿಗೆ ಇದರಿಂದ ಒಟ್ಟಾರೆ ಅನುಕೂಲವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net