ವಡಗೆರೆಯಲ್ಲಿ ಚಿರತೆ ದಾಳಿಗೆ ಕರು ಬಲಿ

Oplus_131072
Oplus_131072
Published on

ಯಳಂದೂರು: ತಾಲೂಕಿನ ವಡಗೆರೆ ಗ್ರಾಮದ ರಮೇಶ್ ಅವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಶನಿವಾರ ರಾತ್ರಿ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಭಾನುವಾರ ಬೆಳಗ್ಗೆ ಕೊಟ್ಟಿಗೆ ಹೋಗಿ ನೋಡಿ, ಕರು ಇಲ್ಲದಿದ್ದಾಗ ಹುಡುಕಾಟ ನಡೆಸಿದ್ದಾರೆ. ಸಂಜೆ ಗ್ರಾಮದ ಸಮೀಪ ಇರುವ ಕಬ್ಬಿನ ಗದ್ದೆಯಲ್ಲಿ ಕರು ಸಾವನ್ನಪ್ಪಿರುವುದು ಕಂಡುಬಂತು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ ಸುತ್ತಮುತ್ತ ರಾತ್ರಿ ವೇಳೆ ಕಾಡು ಪ್ರಾಣಿಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸುವ ಮೂಲಕ ಮುನ್ನಚ್ಚರಿಕೆ ಕ್ರಮವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಡಗೆರೆ ಗ್ರಾಮದಲ್ಲಿ 6 ತಿಂಗಳ ಕರುವನ್ನು ಚಿರತೆ ತಿಂದು ಹೋಗಿರುವ ಬಗ್ಗೆ ಪರಿಶೀಲಿಸಿದ್ದು, ಹೆಚ್ಚಿನ ನಿಗಾವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಬಿಆರ್‌ಟಿ ಆರ್‌ಎಫ್‌ಒ ನಾಗೇಂದ್ರ ನಾಯಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net