

ಚಾಮರಾಜನಗರ: ನಗರದ ರಾಮಸಮುದ್ರ ಬಡಾವಣೆಯ ಹೊಸದುರ್ಗಿ ಬೀದಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅನಾಹುತ ತಪ್ಪಿದಂತಾಗಿದೆ.
ವಿದ್ಯುತ್ ಕಂಬ ಬೀಳುವುದನ್ನು ಮೊದಲೇ ಅರಿತ ಬಡಾವಣೆ ನಿವಾಸಿಗಳು ಕೆಇಬಿ ಇಂಜಿನಿಯರ್ ಮಂಜುನಾಥ್ ಅವರಿಗೆ ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸಿಬ್ಬಂದಿ ಕರೆಸಿ ಎಲ್ಲ ವಿದ್ಯುತ್ ತಂತಿಯನ್ನು ಕತ್ತರಿಸಿ ಸಮಯ ಪ್ರಜ್ಞೆ ಮೆರೆದು ಮುಂದೆ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಮಳೆಗಾಲದಲ್ಲಿ ಇದು ಸರ್ವೇ ಸಾಮಾನ್ಯ. ಎಲ್ಲೇ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿದ್ದರೂ, ಕಂಬಗಳು ಬೀಳುವ ಸ್ಥಿತಿಯಲ್ಲಿದ್ದರೆ, ತಂತಿಗಳ ಮೇಲೆ ಮರದ ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದರೆ, ತಕ್ಷಣ ವಿದ್ಯುತ್ ಮಂಡಳಿಗೆ ಮಾಹಿತಿ ತಿಳಿಸುವಂತೆ ಮಂಜುನಾಥ್ ತಿಳಿಸಿದರು.