ಠಾಣೆ ಮುಂಭಾಗ ಗ್ರಾಮಸ್ಥರ ಪ್ರತಿಭಟನೆ

09rajesh6
Published on

ಚಾಮರಾಜನಗರ : ತಾಲೂಕಿನ ಕುದೇರು ಪೊಲೀಸ್ ಠಾಣೆ ಪಿಎಸ್‌ಐ ಪಿ.ಎಸ್.ಮಂಜುನಾಥ್ ನಾಯಕ್ ಸಾರ್ವಜನಿಕರ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಶನಿವಾರ ಕುದೇರು ಗ್ರಾಮಸ್ಥರು ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲೂಕಿನ ಕುದೇರು, ಬಡಗಲಮೋಳೆ, ತೆಂಕಲಮೋಳೆ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಪಿಎಸ್‌ಐ ವರ್ತನೆಯ ವಿರುದ್ಧ ೋಷಣೆ ಕೂಗಿದರು. ಪೊಲೀಸ್ ಠಾಣೆ ಜನಸ್ನೇಹಿಯಾಗಿರಬೇಕು, ಆದರೆ ಪಿಎಸ್‌ಐ ಮಂಜುನಾಥ್ ನಾಯಕ್ ಸರ್ವಾಧಿಕಾರಿಯಂತೆ ಕೆಲಸ ಮಾಡುತ್ತಿದ್ದಾರೆ. ಕುದೇರು ಠಾಣೆಗೆ ಉತ್ತಮ ಪೊಲೀಸ್ ಠಾಣೆ ಎಂದು ಹೆಸರು ಪಡೆದಿತ್ತು. ಈಗ ಪಿಎಸ್‌ಐ ಠಾಣೆಗೆ ಬರುವ ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮದಲ್ಲಿ ಪೊಲೀಸ್ ಠಾಣೆ ಇದ್ದರೂ ರಾತ್ರಿಯ ವೇಳೆಯಲ್ಲಿ ಅಕ್ರಮವಾಗಿ ಕರಿಕಲ್ಲು ಸಾಗಣೆ ಮಾಡಲಾಗುತ್ತಿದೆ. ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಠಾಣೆ ವಿಲವಾಗಿದೆ. ಕೂಡಲೇ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮವನ್ನು ಬಂದ್‌ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಜಯಶಂಕರ್, ಕೆ.ಸಿ.ರೇವಣ್ಣ, ಮಹದೇವಯ್ಯ, ಅಶೋಕ್, ನಾಗರಾಜು, ರವೀಂದ್ರ, ಸೋಮಣ್ಣ, ಚೇತನ್, ನಾಗಸುಂದರ್, ಶಿವಕುಮಾರ್, ಪ್ರಸಾದ್, ಕೈಲಾಶ್ ಹಾಗೂ ಕುದೇರು, ಬಡಗಲಮೋಳೆ, ತೆಂಕಲಮೋಳೆ ಹಾಗೂ ಮೂಡಲ ಅಗ್ರಹಾರ ಗ್ರಾಮಸ್ಥರು ಭಾಗವಹಿಸಿದ್ದರು.

ಅಮಾನತು ಮಾಡದಿದ್ದರೇ ಎಸ್ಪಿಗೆ ದೂರು:
ಪಿಎಸ್‌ಐ ಮಂಜುನಾಥ್ ನಾಯಕ್ ಅವರನ್ನು ವರ್ಗಾವಣೆ ಮಾಡುತ್ತೇವೆ ಎಂದು ಮೇಲಾಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಈಗಲೂ ಯಾವುದೇ ಕ್ರಮವಹಿಸದಿದ್ದರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಜುನಾಥ್ ನಾಯಕ್ ವಿರುದ್ಧ ದೂರು ಸಲ್ಲಿಸಲಾಗುವುದು ಎಂದು ಕುದೇರು ಗ್ರಾಮದ ಜಯಶಂಕರ್ ವಿಜಯವಾಣಿ ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net