ಕೋಡಿಮೋಳೆಯಲ್ಲಿ ಭಗೀರಥ ಮಹರ್ಷಿ ಜಯಂತಿ

PHOTO-
Published on

ಚಾಮರಾಜನಗರ : ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಭಗತ್‌ಸಿಂಗ್ ಯುವ ಸೇನೆ ವತಿಯಿಂದ ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಭಾನುವಾರ ಕಿರಿಯ ಮಕ್ಕಳ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ ಮೂರು ತಂಡಗಳು ಭಾಗವಹಿಸಿದ್ದವು.

ಇದರಲ್ಲಿ ಗ್ರಾಮದ ಹೊಸಕೇರಿ ಬಾಯ್ಸ ಹಾಗೂ ರಾಯಲ್ ಬಾಯ್ಸ ತಂಡಗಳು ಜಯಗಳಿಸಿದವು. ಹೊಸಕೇರಿ ಬಾಯ್ಸ ತಂಡಕ್ಕೆ ಪ್ರಥಮ ಬಹುಮಾನ ಹಾಗೂ ರಾಯಲ್ ಬಾಯ್ಸ ತಂಡಕ್ಕೆ ದ್ವಿತೀಯ ಬಹುಮಾನ ವಿತರಿಸಲಾಯಿತು. ಪಂದ್ಯಾವಳಿ ಆಯೋಜಕ ಮತ್ತು ಭಗತ್ ಯುವಸೇನೆ ಅಧ್ಯಕ್ಷ ಕಾಂತರಾಜು ಬಹುಮಾನ ವಿತರಿಸಿ ಮಾತನಾಡಿ, ಪ್ರಸ್ತುತ ಮಕ್ಕಳು ಓದಿನ ಜತೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಮೊಬೈಲ್ ಬಳಕೆಯಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆಯಬೇಕು ಎಂದರು. ಭಗತ್ ಯುವಸೇನೆಯ ಪದಾಧಿಕಾರಿ ನಾಗೇಶ್, ಅಪ್ಪು, ಕೀರ್ತಿ, ಶಿವು, ಕೃಷ್ಣ, ಸುನೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net