ಮಳೆಯಿಂದ ದುರಸ್ತಿಗೊಂಡಿದ್ದ ಸೇತುವೆ ಪರಿಶೀಲನೆ

09 HANUR 1 (1)
Published on

ಹನೂರು: ತಾಲೂಕಿನ ರಾಮಾಪುರ ಹೋಬಳಿಯ ಕೊಪ್ಪ ಗ್ರಾಮದ ಬಳಿ ಮಳೆಯಿಂದಾಗಿ ದುರಸ್ತಿಗೊಂಡಿದ್ದ ಮುಖ್ಯರಸ್ತೆ ಸೇತುವೆ ಸ್ಥಳಕ್ಕೆ ಭಾನುವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಕೊಪ್ಪ ಸೇರಿದಂತೆ ಗಾಜನೂರು, ಮಿಣ್ಯಂ, ಹೂಗ್ಯಂ ಹಾಗೂ ಇನ್ನಿತರ ಗ್ರಾಮದ ಜನರು ಈ ಮುಖ್ಯರಸ್ತೆಯ ಮೂಲಕ ಸಂಚರಿಸುತ್ತಿದ್ದು, ಈ ಹಳ್ಳಕ್ಕೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸೇತುವೆ ಹಾಗೂ ರಸ್ತೆ ಕುಸಿದಿದೆ. ಇದರಿಂದ ಜೋರು ಮಳೆ ಬಂತೆಂದರೆ ಸೇತುವೆ ಮೇಲೆ ನೀರು ಹರಿಯುತ್ತದೆ. ಪರಿಣಾಮ ಸಂಚರಿಸಲು ತುಂಬ ತೊಂದರೆಯಾಗಿದೆ. ಇನ್ನು ಈ ಸೇತುವೆ ಸಂಪೂರ್ಣ ಕುಸಿದರೆ ಸಂಚಾರ ಸ್ಥಗಿತವಾಗಲಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸೇತುವೆ ರಿಪೇರಿ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಸೇತುವೆಯನ್ನು ರಿಪೇರಿ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರಲ್ಲದೆ ಸಂಬಂಧಪಟ್ಟ ಅಧಿಕಾರಿಗೆ ಫೋನಾಯಿಸಿ ಕೂಡಲೇ ಈ ಬಗ್ಗೆ ಕ್ರಮವಹಿಸಿ ಸೇತುವೆ ರಿಪೇರಿ ಮಾಡುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಗ್ರಾಪಂ ಅಧ್ಯಕ್ಷ ಮಾದೇಶ್, ಮುಖಂಡರಾದ ಮಂಜೇಶ್, ಮುನಿಯಪ್ಪ, ನಾಗರಾಜು, ಮಹಾದೇವ, ಎಸ್.ನಾಗರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net