

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ವಿರುದ್ಧ ಪ್ರತಿಸ್ಪರ್ಧಿ ಪಕ್ಷ ಬಿಜೆಪಿ ಪ್ರಯೋಗಿಸಿದ್ದ ಅಸ್ತ್ರ ಚಿಮ್ಮಲು ದಿನಗಣನೆ ಶುರುವಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಗೆಲ್ಲುವುದಕ್ಕಾಗಿ ಮಾಡಿದ ಕಸರತ್ತು, ಬಳಕೆ ಮಾಡಿದ್ದ ಅಸಗಳು ಒಂದೆರಡಲ್ಲ. ಅಂತಿಮ ಲಿತಾಂಶದಲ್ಲಿ ಅವುಗಳಿಂದ ಬಿಜೆಪಿಗೆ ಎಷ್ಟರ ಮಟ್ಟಿಗೆ ಲ ಸಿಕ್ಕಿವೆ ಎನ್ನುವುದು ಈಗಾಗಲೇ ಗೊತ್ತಾಗಿದೆ. ಸುನೀಲ್‌ಬೋಸ್ ಗೆದ್ದಾಗಿದೆ, ಬಾಲರಾಜ್ ಸೋಲುಂಡಾಗಿದೆ. ಇನ್ನೇನೂ ಬಾಕಿ ಉಳಿದಿಲ್ಲ ಎನ್ನುವಾಗ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಯೋಗಿಸುತ್ತಿದ್ದ ‘ಸುನೀಲ್‌ಬೋಸ್ ಗೆದ್ದರೆ ಕೈಗೆ ಸಿಗಲ್ಲ’ ಎಂಬ ಗಂಭೀರ ಆರೋಪ ಸತ್ಯವೋ ಅಥವಾ ಸುಳ್ಳೋ ಎನ್ನುವುದನ್ನು ತಿಳಿಯುವ ಪ್ರಾಯೋಗಿಕ ದಿನಗಳು ಆರಂಭಗೊಂಡಿವೆ.
ಚುನಾವಣೆ ಪ್ರಚಾರದ ವೇಳೆ ಸುನೀಲ್‌ಬೋಸ್ ವಿರುದ್ಧ ಬಿಜೆಪಿ, ಎಸ್.ಬಾಲರಾಜ್ ವಿರುದ್ಧ ಕಾಂಗ್ರೆಸ್ ಹಲವು ಆರೋಪಗಳನ್ನು ಮಾಡಿತ್ತು. ಕಿಡಿಗೇಡಿಗಳು ಒಂದು ಹೆಜ್ಜೆ ಮುಂದೆ ಸಾಗಿ ಸುಳ್ಳು ಅಪಪ್ರಚಾರಗಳನ್ನು ಮಾಡಿದ್ದರು. ಅರ್ಥವಿಲ್ಲದ ಆರೋಪಗಳಿಗೆಲ್ಲ ತಲೆ ಕೆಡಿಸಿಕೊಳ್ಳದ ಕ್ಷೇತ್ರದ ಮತದಾರರು ಗಂಭೀರವೆನಿಸಿರುವ ಆಪಾದನೆಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ.
ಇವುಗಳಲ್ಲಿ ಸುನೀಲ್‌ಬೋಸ್ ಕುರಿತಾಗಿ ಮತದಾರರಿಗೆ ಬಿಜೆಪಿ ಹೇಳುತ್ತಿದ್ದ ಮಾತೆಂದರೆ ‘ಬೋಸ್ ಗೆದ್ದರೆ ಜನರ ಸಂಪರ್ಕಕ್ಕೆ ಸಿಗಲ್ಲ’ ಎನ್ನುವುದಾಗಿತ್ತು. ಇದಕ್ಕೆ ಈಗ ಮಾತಿನ ಬದಲು ಕೃತಿಯಲ್ಲಿ ಉತ್ತರ ಕೊಡುವ ಕಾಲ ಸುನೀಲ್‌ಬೋಸ್‌ಗೆ ಒದಗಿ ಬಂದಿದೆ. ಮತದಾರ ಮಹಾಪ್ರಭು ಇದರ ನೈಜ ಅನುಭವವನ್ನು ಪಡೆದುಕೊಳ್ಳಲಿದ್ದಾನೆ. ಸಾರ್ವಜನಿಕ ವಲಯದಲ್ಲಿ ಈ ವಿಷಯದಡಿ ಸತ್ಯ-ಮಿತ್ಯದ ಚರ್ಚೆಯಾಗಲಿದೆ.
‘ಪ್ರಸಾದ್’ ಅನುಪಸ್ಥಿತಿಯ ಎೆಕ್ಟ್:
ಸಂಸದರಾಗಿದ್ದ ವಿ.ಶ್ರೀನಿವಾಸಪ್ರಸಾದ್ ಸುದೀರ್ಘ 50 ವರ್ಷಗಳ ಕಾಲ ರಾಜಕೀಯ ಮಾಡಿದವರು. ಆರೋಗ್ಯ ಚೆನ್ನಾಗಿದ್ದಾಗ ಒಂದೂ ದಿನವೂ ಜನಸೇವೆ ಮಾಡದೆ ಕುಳಿತವರಲ್ಲ. ಆದರೆ, ಅನಾರೋಗ್ಯ ಕೈಕೊಡಲಾರಂಭಿಸಿದಾಗ ಅಡಚಣೆ ಉಂಟಾಯಿತು. ಕಳೆದ ಅವಧಿಯಲ್ಲಿ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ ಹಾಗೂ ಜನ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಹಲವು ಪ್ರಗತಿ ಪರಿಶೀಲನೆ ಸಭೆಗಳು, ಕಾರ್ಯಕ್ರಮಗಳಿಗೆ ಗೈರಾಗಬೇಕಾಯಿತು. ಇದು ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಎೆಕ್ಟ್ ಕೊಟ್ಟಿತ್ತು. ಲೋಕಸಭೆ ಚುನಾವಣೆಯಲ್ಲಿ ಕಳೆದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿತ್ತು.
ನಿರಂತರ ಸಂಪರ್ಕ ಬಯಸುವ ಕ್ಷೇತ್ರ:
ಕ್ಷೇತ್ರದ ಜನರೊಂದಿಗೆ ಜನಪ್ರತಿನಿಧಿಗಳು ನಿರಂತರವಾಗಿ ಸಂರ್ಪಕದಲ್ಲಿರಬೇಕು. ವಿ.ಸೋಮಣ್ಣ ಅವರಂತಹ ಹಿರಿಯ ರಾಜಕಾರಣಿ ಎದುರಾಳಿಯಾದಾಗಲೂ ಸಿ.ಪುಟ್ಟರಂಗಶೆಟ್ಟಿ ಗೆಲುವಿನ ನಗೆ ಬೀರಲು ಜನರೊಂದಿಗಿನ ನಿತ್ಯ ಸಂಪರ್ಕವೇ ಕಾರಣ. ಸ್ವತಃ ತಾನೇ ೆನ್ ಕರೆ ಸ್ವೀಕರಿಸುವುದು, ಸಾರ್ವಜನಿಕರ ಭೇಟಿಗೆ ಲಭ್ಯವಿರುವುದು ಶೆಟ್ಟರ ದಿನಚರಿಗಳಲ್ಲಿ ಪ್ರಧಾನವಾದವು. ನೂತನ ಸಂಸದ ಸುನೀಲ್‌ಬೋಸ್ ಕೂಡ ನೇರ ಒಡನಾಟ ಹೊಂದಬೇಕೆಂದು ಕ್ಷೇತ್ರ ಬಯಸುತ್ತದೆ. ಅವಘಡಗಳು, ದುರಂತಗಳು ಸಂಭವಿಸಿದಾಗ ಬರುವುದು ಬಿಟ್ಟು, ಇವೆಲ್ಲ ಸಂಭವಿಸದಂತೆ ಆಡಳಿತ ನಡೆಸಬೇಕೆಂಬ ಅಪೇಕ್ಷೆ ಇದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆಗಳಲ್ಲೂ ಸಕ್ರಮವಾಗಿ ಜನರೊಂದಿಗೆ ಬೆರೆಯಬೇಕು, ಕೆಲಸ ಕಾರ್ಯಗಳಿಗಾಗಿ ಜಿಲ್ಲಾಕೇಂದ್ರಕ್ಕೆ ಬರುವ ಜನರಿಗೆ ಕಚೇರಿಯಲ್ಲಿ ಸಿಗಬೇಕು, ಸಂಸದರ ದೂರವಾಣಿ ನೊಂದವರ ಪಾಲಿಗೆ ಸಹಾಯವಾಣಿಯಾಗಬೇಕೆಂಬ ನಿರೀಕ್ಷೆಗಳಿವೆ.
ಮುಖಂಡರ ನಂಬಿಕೆ ದೊಡ್ಡದು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿರುವ ಮುಖಂಡರ ದೊಡ್ಡ ಪಟ್ಟಿಯೇ ಇದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮುಖ ನೋಡಿಕೊಂಡು ಅವರ ಮಗ ಸುನೀಲ್‌ಬೋಸ್‌ಗೆ ಬೆಂಬಲ ಸೂಚಿಸಿರುವವರೇ ಹೆಚ್ಚು. ಇವರ ನಿರೀಕ್ಷೆಗಳನ್ನೂ ಪೂರ್ಣಗೊಳಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಲೀಡ್ ಕೊಡಿಸಿರುವ ಶಾಸಕರು, ಮಾಜಿ ಶಾಸಕರೂ ನೂತನ ಸಂಸದರ ಜನ ಸಂಪರ್ಕವನ್ನು ವೃದ್ಧಿಗೊಳಿಸುವ ಜವಾಬ್ದಾರಿ ಹೊಂದಿದ್ದಾರೆ.
‘ಉಸ್ತುವಾರಿ’ ಸಂಪರ್ಕಿಸುವುದೂ ಸುಲಭವಲ್ಲ:
ಮತದಾನದ ದಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತದಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣ ಗಂಭೀರತೆ ಪಡೆದುಕೊಂಡಿತ್ತು. ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭೇಟಿ ನೀಡಲಿಲ್ಲ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬರಲಿಲ್ಲ. ಅದಾಗ್ಯೂ ಸಚಿವರು ಪಕ್ಷದ ಮುಖಂಡರನ್ನು ಹೊರತುಪಡಿಸಿ ಜಿಲ್ಲೆಯೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ಅಷ್ಟಕ್ಕಷ್ಟೆ. ಜನಸಾಮಾನ್ಯರು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸುವ ಹಾದಿ ಕಠಿಣವಾಗಿದೆ.
ಚಾ.ನಗರದಲ್ಲಿ ಮನೆ:
ಇಲ್ಲಿರುವ ಜನರು ಮೈಸೂರಿಗೆ ಬರಲು ಸಾಧ್ಯವಿಲ್ಲ. ಇಲ್ಲೇ ಒಂದು ಮನೆಯನ್ನು ಮಾಡುತ್ತೇನೆ ಎಂದು ನೂತನ ಸಂಸದ ಸುನೀಲ್‌ಬೋಸ್ ಹೇಳಿದ್ದಾರೆ. ಚುನಾವಣೆ ಲಿತಾಂಶ ಬಂದ ದಿನ ಮಾಧ್ಯಮವರೊಂದಿಗೆ ಮಾತನಾಡಿದ್ದ ಅವರು, ನಾನು ಇಲ್ಲಿಗೆ ಬಂದಾಗ ಜನರನ್ನು ಭೇಟಿ ಮಾಡಲು ಇಲ್ಲೊಂದು ಮನೆಯನ್ನು ಮಾಡುತ್ತೇನೆ ಎಂದಿದ್ದಾರೆ.
5 ದಿನ ಭೇಟಿಗೆ ಲಭ್ಯವಿಲ್ಲ:
ಆತ್ಮೀಯ ಬಂಧುಗಳೇ, ನಾನು ದೆಹಲಿಗೆ ತೆರಳುತ್ತಿರುವ ಕಾರಣ ಜೂ.8ರಿಂದ 12ವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ. ಹೀಗೆಂದು ನೂತನ ಸಂಸದ ಸುನೀಲ್‌ಬೋಸ್‌ನ ಕಾಂಗ್ರೆಸ್ ಮಾಧ್ಯಮ ಕಾರ್ಯದರ್ಶಿ ರಾಜೇಶ್ ಮೂಲಕ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ಸಂದೇಶ ರವಾನಿಸಿದ್ದಾರೆ.