ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮ

06rajesh7
Published on

ಚಾಮರಾಜನಗರ: ಶ್ರೀಬಸವೇಶ್ವರ ಜಯಂತೋತ್ಸವದ ಅಂಗವಾಗಿ ಶ್ರೀವಿರಕ್ತ ಮಠದಲ್ಲಿ ರಾತ್ರಿಯವರೆಗೂ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ನಡೆಯಿತು.

ಹಾಸನ ಜಿಲ್ಲೆಯ ಮಲ್ಲಿಕಾರ್ಜುನ ಬೆಟ್ಟ, ಬೇಲೂರು ಮಠದ ಶ್ರೀಮಹಾಂತ ಬಸವಲಿಂಗಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ನೆರೆದಿದ್ದ ಭಕ್ತರಿಗೆ ಪ್ರವಚನ ನೀಡಿದರು. ಮಧ್ಯಾಹ್ನ 1 ಗಂಟೆಗೆ ತೊರವಳ್ಳಿಯ ಟಿ.ಸಿ.ಸೋಮಣ್ಣ ಮತ್ತು ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಹಲವು ಮಠಾಧೀಶರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ವಿವಿಧ ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಜಯಂತೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಬಹಳ ಅಚ್ಚುಕಟ್ಟಿನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net