ಬಸವೇಶ್ವರ ಪುತ್ಥಳಿ ವೈಭವದ ಮೆರವಣಿಗೆ

06rajesh5
Published on

ಚಾಮರಾಜನಗರ: ಗ್ರಾಮಾಂತರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಶ್ರೀಬಸವೇಶ್ವರರ ಭಾವಚಿತ್ರ ಮೆರವಣಿಗೆಯಲ್ಲಿ ವೈಭವದಿಂದ ನಡೆಯಿತು.

ಮೆರವಣಿಗೆಯಲ್ಲಿ ವೀರಗಾಸೆ, ಗೊರವರ ಕುಣಿತ, ಕಂಸಾಲೆ, ಗೊಂಬೆ ಕುಣಿತ, ಡೊಳ್ಳುಕುಣಿತ, ನಗಾರಿ, ತಮಟೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯ ವೈಭವವನ್ನು ಹೆಚ್ಚಿಸಿದರು. ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಂದಿಧ್ವಜ ಕುಣಿತ ಭಾವಚಿತ್ರ ಮೆರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ತಾಲೂಕಿನ ರೇಚಂಬಳ್ಳಿ, ಕುಲಗಾಣ, ಕಾಳನಹುಂಡಿ, ಹೆಗ್ಗೋಠಾರ, ಗೌಡಹಳ್ಳಿ, ಕುಮಚಹಳ್ಳಿ , ಪುಟ್ಟನಪುರ, ಮರಿಯಾಲ ಹಾಗೂ ಇನ್ನಿತರೆ ಗ್ರಾಮಗಳಿಂದ ತಂದಿದ್ದ ನಂದಿಧ್ವಜಗಳನ್ನು ನೂರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಒತ್ತು ಕುಣಿದರು.

ಅದಲ್ಲದೇ ಹರದನಹಳ್ಳಿ, ಜ್ಯೋತಿಗೌಡನಪುರ, ಆಲೂರು, ಕುಮಚಹಳ್ಳಿ, ಮಾದಾಪುರ, ರೇಚಂಬಳ್ಳಿ, ವಿ.ಸಿ.ಹೊಸೂರು, ಬಂದಿಗೌಡನಹಳ್ಳಿ, ಬಿ.ಜಿ.ಕಾಲೋನಿ, ಪುಟ್ಟನಪುರ, ಮರಿಯಾಲ, ಹೆಗ್ಗೋಠಾರ, ಕಾಳನಹುಂಡಿ, ಕಾಡಹಳ್ಳಿ ಗ್ರಾಮದ ಬಸವ ಬಳಗದವರು ತಂದಿದ್ದ ವಿವಿಧ ಅಲಂಕೃತ ಬಸವೇಶ್ವರರ ಭಾವಚಿತ್ರಗಳು ಮೆರವಣಿಗೆಯಲ್ಲಿ ಗಮನಸೆಳೆದವು. ಧ್ವನಿವರ್ದಕದ ಸದ್ದಿಗೆ ರಸ್ತೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಶ್ರೀ ಸಿದ್ದಗಂಗಸ್ವಾಮಿಜಿ ಹಾಗೂ ಬಸವೇಶ್ವರರು ಇದ್ದ ಕೇಸರಿ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net