ನಕ್ಷತ್ರ ಆಮೆ ಸಾಗಿಸುತ್ತಿದ್ದ ಇಬ್ಬರ ಸೆರೆ

Published on

ಕೊಳ್ಳೇಗಾಲ; ಹನೂರಿನ ತಾಲೂಕಿನ ಹುಲುಸು ಗುಡ್ಡದ ಬಳಿ ನಕ್ಷತ್ರ ಆಮೆ ಸಾಗಣೆ ಮಾಡುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳನ್ನು ಬುಧವಾರ ಅರಣ್ಯ ಸಂಚಾರ ದಳ ಬಂಧಿಸಿದೆ.

ತಮಿಳುನಾಡು ಮೂಲದ ಸುಕುಮಾರನ್ ಹಾಗೂ ಭೈರರೆಡ್ಡಿ ಬಂಧಿತರು. ಇವರು ಹನೂರಿನ ಹುಲುಸುಗೊಡ್ಡೆ ಬೋರೆ ಬಳಿ ನಕ್ಷತ್ರ ಆಮೆಯನ್ನು ಚೀಲದೊಳಗೆ ಹಾಕಿಕೊಂಡು ಬೈಕ್‌ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಅರಣ್ಯ ಸಂಚಾರ ದಳದ ಪಿಎಸ್‌ಐ ವಿಜಯರಾಜ್ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, ಆಮೆ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲದ ಅರಣ್ಯ ಸಂಚಾರ ದಳದ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net