ಚಾಮರಾಜನಗರ: ಚಾ.ನಗರ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ಬಳಿ ಮಧ್ಯಾಹ್ನದವರೆಗೂ ವಿವಿಧ ಪಕ್ಷಗಳ ಯಾವ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿಲ್ಲ.
ಹಲವು ಪಕ್ಷಗಳ ಏಜೆಂಟ್‌ಗಳನ್ನು ಹೊರತುಪಡಿಸಿದರೆ ಕಾರ್ಯಕರ್ತರ ಸುಳಿವೇ ಕಾಣುತ್ತಿರಲಿಲ್ಲ. ಬೆಳಿಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಂ ತೆಗೆದು ಮತ ಎಣಿಕೆ ಪ್ರಾರಂಭ ಮಾಡಲಾಗಿತ್ತು. ಆದರೂ ಇಷ್ಟು ಚುನಾವಣೆಗಳಲ್ಲಿ ಬೆಳಿಗ್ಗೆಯಿಂದಲೇ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸುತ್ತಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರಂತೆ ಈ ಬಾರಿಯ ಚುನಾವಣೆಯಲ್ಲಿ ಮಧ್ಯಾಹ್ನದ ವರೆಗೂ ಕಾರ್ಯಕರ್ತರು ಕಾಣಿಸಿಕೊಳ್ಳಲಿಲ್ಲ.
ಸಾರ್ವಜನಿಕರು ಹೆಚ್ಚಾಗಿ ಮೊಬೈಲ್, ಟಿವಿಗಳಲ್ಲಿ ಲಿತಾಂಶವನ್ನು ತಿಳಿದುಕೊಳ್ಳುತ್ತಿದ್ದ ಪರಿಣಾಮವಾಗಿಯೋ, ಏನೋ ಮತ ಎಣಿಕೆ ಕೇಂದ್ರದ ಮುಖ್ಯದ್ವಾರ, ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿ ಜನರು ವಿರಳವಾಗಿ ಕಂಡುಬಂದರು. ಮತ ಎಣಿಕೆ ಕಾರ್ಯ ವಿಳಂಬವಾಗುತ್ತದೆ ಎಂಬ ಮಾಹಿತಿಯನ್ನು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬರುವುದು ತಡವಾಗುತ್ತದೇ ಎಂಬ ಕಾರಣದಿಂದ ಕಾರ್ಯಕರ್ತರು ಅಷ್ಟಾಗಿ ಮತ ಕೇಂದ್ರದ ಬಳಿ ಸುಳಿದಿರಲಿಲ್ಲ. ಸುನೀಲ್‌ಬೋಸ್ ಗೆಲವು ಸಮೀಪವಾಗುತ್ತಿದ್ದಂತೆ ನಿಧಾನವಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದರು.