ವಿಳಂಬವಾದರೂ ಶಿಸ್ತುಬದ್ಧ ಮತ ಎಣಿಕೆ

04rajesh5
Published on

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಕೆಲಕಾಲ ವಿಳಂಬವಾಯಿತು ಎಂಬ ವಿವಿಧ ಪಕ್ಷದ ಏಜೆಂಟ್‌ಗಳ ಆರೋಪದ ನಡುವೆಯೂ ಮತ ಎಣಿಕೆ ಕಾರ್ಯ ಶಿಸ್ತಬದ್ಧವಾಗಿ ನಡೆಯಿತು.

ನಗರದ ಬೇಡರಪುರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲಾಧಿಕಾರಿ ಶಿಲ್ಪಾನಾಗ್ ಅವರ ಸಮ್ಮುಖದಲ್ಲಿ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್‌ರೂಂ ಅನ್ನು ತೆರೆಯಲಾಯಿತು. ಬಳಿಕ ಮತ ಎಣಿಕೆ ಕಾರ್ಯ ಶರುವಾಯಿತು. ಕೆಲಕಾಲ ಸೂಕ್ತ ರೀತಿಯಲ್ಲಿ ಮತ ಎಣಿಕೆ ಕಾರ್ಯ ಸುಲಲಿತವಾಗಿ ನಡೆಯುತ್ತಿತ್ತು. ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ವಿಳಂಬವಾಗುತ್ತಿದೆ ಎಂದು ವಿವಿಧ ಪಕ್ಷಗಳ ಏಜೆಂಟ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಎಲ್ಲ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸೂಕ್ತ ರೀತಿಯಲ್ಲಿ ನಡೆಯುತ್ತಿದ್ದು, ಟಿ.ನರಸೀಪುರ ಕ್ಷೇತ್ರದ ಎಣಿಕೆ ಕಾರ್ಯ ವಿಳಂಬವಾಗುತ್ತಿದೆ ಎಂದು ಏಜೆಂಟರು ಅಧಿಕಾರಿಗಳ ವಿರುದ್ಧ ದೂರಿದರು. ಇದರಿಂದಾಗಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಬಳಿಕ ಅಧಿಕಾರಿಗಳು ಏಜೆಂಟ್‌ಗಳನ್ನು ಸಮಾಧಾನ ಪಡಿಸಿದ ಬಳಿಕ ಮತ ಎಣಿಕೆ ಸುಗಮವಾಗಿ ನಡೆಯಿತು. ಮತ ಎಣಿಕೆಗೆ ಆಗಮಿಸಿದ ಅಧಿಕಾರಿಗಳಿಗೆ ಹಾಗೂ ಪೋಲಿಸರಿಗೆ ಉತ್ತಮ ರೀತಿಯಲ್ಲಿ ಕುಡಿಯುವ ನೀರು, ಊಟ, ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net