

ಚಾಮರಾಜನಗರ: ಮತಯಂತ್ರದಲ್ಲಿ ನಡೆದ ಎಣಿಕೆಯಲ್ಲಿ ಎಲ್ಲಾ ಸುತ್ತುಗಳಲ್ಲೂ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಅಂಚೆ ಮತದಲ್ಲಿ ಮುನ್ನಡೆ ಸಾಧಿಸಿತ್ತು.
ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಅಂಚೆ ಮತದಲ್ಲಿ 1909 ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ 1745 ಮತಗಳಷ್ಟೇ ಪಡೆದುಕೊಂಡಿದ್ದರು. ಮುಖ್ಯವಾಗಿ ಅಂಚೆಮತದಲ್ಲೇ 539 ಮತಗಳು ತಿರಸ್ಕೃತವಾಗಿತ್ತು.