

ಚಾಮರಾಜನಗರ: ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ 1991 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆಮಾಡಿದ್ದರು.
ಜನತಾದಳದ ಅಭ್ಯರ್ಥಿಯಾಗಿದ್ದ ಡಾ.ಎಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರಾಜಿತಗೊಂಡಿದ್ದರು. ಈಗ ಎರಡು ದಶಕಗಳ ಬಳಿಕ ಅದೇ ಕ್ಷೇತ್ರದಲ್ಲಿ ಎಚ್.ಸಿ.ಮಹದೇವಪ್ಪ ಅವರು ತಮ್ಮ ಮಗ ಸುನೀಲ್ ಬೋಸ್ ಅವರನ್ನು ಬಾರಿ ಬಹುಮತದಿಂದ ಗೆಲ್ಲಿಸಿಕೊಂಡಿದ್ದಾರೆ. ಈ ಮೂಲಕ ಸೋತ ಜಾಗದಲ್ಲೇ ತಮ್ಮ ಮಗನನ್ನು ಅಪ್ಪ ಗೆಲ್ಲಿಸಿಕೊಂಡಿದ್ದಾರೆ.