ಮೊದಲ ಬಾರಿಗೆ ಗೆಲುವು

sunil bose
Published on

ಚಾಮರಾಜನಗರ: ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಇಬ್ಬರಿಗೂ ಲೋಕಸಭೆ ಚುನಾವಣೆ ಮೊದಲ ಪ್ರಯತ್ನ. ಎಸ್.ಬಾಲರಾಜ್ 2004ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಅನುಭವದ ಲೆಕ್ಕಾಚಾರದಲ್ಲಿ ಎಸ್.ಬಾಲರಾಜ್ ಮುಂದಿದ್ದರು. ಆದರೆ ಸುನೀಲ್‌ಬೋಸ್ ಇದುವರೆಗೂ ಅಧಿಕಾರ ಕಂಡಿದ್ದವರಲ್ಲ. ತಂದೆ ಡಾ.ಎಚ್.ಸಿ.ಮಹದೇವಪ್ಪ ಅವರ ಚುನಾವಣೆಗಳನ್ನು ಮಾಡಿದ್ದಷ್ಟೇ ಅನುಭವವಾಗಿತ್ತು. ಲೋಕಸಭೆ ಚುನಾವಣೆ ಇವರಿಗೆ ಮೊದಲ ಚುನಾವಣೆಯಾಗಿತ್ತು. ಇದರಲ್ಲೇ ದಾಖಲೆಯ ಅಂತರದಲ್ಲಿ ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net