ಅಧಿಕ ಅಂತರದ ಗೆಲುವಿಗೆ ಕಾರಣವೇನು?

04rajesh3
Published on

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಅಂತರದ ಗೆಲುವಿ ದಾಖಲಿಸಲು ಹಲವು ಕಾರಣಗಳಿವೆ.

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 7,51,671 ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್‌ಗೆ 5,62965 ಮತಗಳು ಲಭಿಸಿವೆ. ಈ ಮೂಲಕ ಬೋಸ್ 1,88,706 ಅಂತರದ ಗೆಲುವನ್ನು ಸಾಧಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಚಾಲಾಕಿತನ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು ಮಾಜಿ ಶಾಸಕರ ಕಸರತ್ತು, ಆರ್.ಧ್ರುವನಾರಾಯಣ್ ಸಾವು ಮತ್ತು ವಿ.ಶ್ರೀನಿವಾಸಪ್ರಸಾದ್ ನಿವೃತ್ತಿಯಿಂದ ನಿರ್ಮಾಣವಾಗಿದ್ದ ದಲಿತ ನಾಯಕತ್ವದ ನಿರ್ವಾತ, ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಕಾಂಗ್ರೆಸ್‌ನ ‘ಕೈ’ಯನ್ನು ಭರ್ಜರಿಯಾಗಿಯೇ ಹಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net