

ಚಾಮರಾಜನಗರ: ಪರಿಶುದ್ಧವಾದ ಚಿನ್ನಗಳನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಹೆಸರುವಾಸಿಯಾಗಿರುವ ಕೊಳ್ಳೇಗಾಲದ ಶ್ರೀವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಚಾಮರಾಜನಗರ ಶಾಖೆ ಭಾನುವಾರ ಬಹಳ ವಿಜೃಂಭಣೆಯಿಂದ ಲೋಕಾರ್ಪಣೆಗೊಂಡಿತು.
ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಮಹೇಶ್ ಗ್ಯಾಸ್ ಏಜೆನ್ಸಿ ಎದುರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಚಿನ್ನಾಭರಣಗಳ ಬೃಹತ್ ಶಾಖೆಯನ್ನು ಕನ್ನಡದ ಖ್ಯಾತ ಚಲನಚಿತ್ರ ನಟಿ ರಾಗಣಿ ದ್ವಿವೇದಿ, ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್‌ನ ಟಿ.ಎ.ಶರವಣ ಹಾಗೂ ಇನ್ನಿತರೆ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕಜ ಜತೆಗೂಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಮಾತನಾಡಿ, ಹೆಣ್ಣುಮಕ್ಕಳ ಜೀವನದಲ್ಲಿ ಚಿನ್ನಾಭರಣಗಳು ಬಹಳ ಮುಖ್ಯವಾದದ್ದು, ಅವರ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅದು ಪ್ರಮುಖ ಪಾತ್ರವಹಿಸುತ್ತದೆ. ಚಾಮರಾಜನಗರ ನನಗೆ ಬಹಳ ಇಷ್ಟವಾದ ಸ್ಥಳವಾಗಿದ್ದು, ಇಲ್ಲಿ ಶ್ರೀವೇಣುಗೋಪಾಲ್ ಚಿನ್ನದ ಮಳಿಗೆ ಉದ್ಘಾಟನೆಯಾಗುತ್ತಿರುವುದು ವೈಯಕ್ತಿಕವಾಗಿ ಹರ್ಷವನ್ನು ಉಂಟುಮಾಡಿದೆ. ವೇಣುಗೋಪಾಲ್ ಅವರ ಆಶೀರ್ವಾದದಿಂದ ಇದೆಲ್ಲವೂ ಆಗುತ್ತಿದೆ ಎಂದು ಹೇಳಿದರು. ಕೊಳ್ಳೇಗಾಲದಲ್ಲಿ ಈ ವರೆಗೂ ಇದ್ದ ಮಳಿಗೆ ಅಲ್ಲದೇ ಚಾಮರಾಜನಗರದಲ್ಲಿ ಮತ್ತೊಂದು ಶಾಖೆಯನ್ನು ತೆರೆದಿರುವುದು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಶ್ರೀವೇಣುಗೋಪಾಲ್ ಚಿನ್ನದ ಮಳಿಗೆಯಲ್ಲಿ ದೊರೆಯುವ ಚಿನ್ನ ಮತ್ತು ವಜ್ರಗಳ ವಿವಿಧ ವಿನ್ಯಾಸಗಳು ಬಹಳ ಇಷ್ಟವಾಯಿತು. ಮುಂದಿನ ದಿನಗಳಲ್ಲಿ 2 ಮಳಿಗೆ 10 ಮಳಿಗೆಯಾಗಲೀ, ಎಲ್ಲಾ ಮಳಿಗೆಗಳ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಟಿ.ಎಸ್.ಶರವಣ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ದೊರಕಿಸಿ ಕೊಡುತ್ತಿರುವುದರಿಂದಲೇ ಮತ್ತೊಂದು ಮಳೆಗೆಯನ್ನು ತೆರೆಯಲು ಸಾಧ್ಯವಾಯಿತು. ಶ್ರೀವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಇಂದಿಗೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂತಹ ಭವ್ಯವಾದ ಚಿನ್ನದ ಮಳಿಗೆಯ ಅಗತ್ಯವಿತ್ತು. ಹೆಚ್ಚು ಹೆಚ್ಚು ಗ್ರಾಹಕರು ಮಳಿಗೆಗೆ ಭೇಟಿ ನೀಡಬೇಕು ಎಂದರು.
ಈ ವೇಳೆ ಆಲ್ ಇಂಡಿಯಾ ಜೆಮ್ಸ್ ಅಂಡ್ ಜ್ಯೂಯಲರಿ ಡೊಮೆಸ್ಟಿಕ್ ಕೌನ್ಸಿಲ್ ಅಧ್ಯಕ್ಷ ಸಯಂ ಮೆಹ್ರ, ಇಂಡಿಯನ್ ಬುಲಿಯನ್ ಮತ್ತು ಜ್ಯೂಯಲರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ.ಚೇತನ್‌ಕುಮಾರ್ ಮೆಹ್ತಾ, ಕರ್ನಾಟಕ ಸ್ಟೇಟ್ ಜ್ಯೂಯಲರ್ಸ್ ೆಡರೇಶನ್ ಅಧ್ಯಕ್ಷ ಶ್ರೀಕಾಂತ್ ಕರಿ, ಓ.ಎ.ವೇಣುಗೋಪಾಲ್, ಓ.ಎ.ದಿವಾಕರ್, ಅದ್ವೈತ್ ಡಿ.ಓಲೇಟಿ, ಅನ್‌ಮೋಲ್ ಡಿ.ಓಲೇಟಿ ಹಾಗೂ ಓಲೇಟಿ ಕುಟುಂಬವರ್ಗದವರು ಉಪಸ್ಥಿತರಿದ್ದರು.
ಅತ್ಯಾಕರ್ಷಕ ಚಿನ್ನಾಭರಣ:
ಶ್ರೀವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್‌ನಲ್ಲಿ ಮೊದಲ ದಿನವೇ ಪ್ರದರ್ಶನಕ್ಕೆ ಇಟ್ಟಿದ್ದ ಅತ್ಯಾಕರ್ಷಕ ಚಿನ್ನಾಭರಣಗಳು, ವಜ್ರಗಳನ್ನು ಕಂಡು ಗ್ರಾಹಕರು ಬೆರಗಾದರು. ಭವ್ಯವಾದ ಮಳಿಗೆಯನ್ನು ಕಣ್ತುಂಬಿಕೊಳ್ಳುತ್ತ ನೂರಾರು ಜನರು ಒಳಾಂಗಣದ ಸೌಂದರ್ಯಕ್ಕೆ ಮಾರುಹೋದರು. ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರನ್ನು ಕೇರಳದ ಚೆಂಡೆ ವಾದನದ ಮೂಲಕ ಬರಮಾಡಿಕೊಳ್ಳಲಾಯಿತು. ಉದ್ಘಾಟನೆಯ ನಂತರ ನಟಿ ರಾಗಿಣಿ ಹಾಗೂ ಗಣ್ಯರು ವಿವಿಧ ವಿನ್ಯಾಸಗಳ ಚಿನ್ನಾಭರಣಗಳನ್ನು ವೀಕ್ಷಣೆ ಮಾಡಿದರು. ಈ ವೇಳೆ ಚಿತ್ರನಟಿ ರಾಗಿಣಿ ಅವರನ್ನು ಕಾಣಲು ನೂಕುನುಗ್ಗಲು ಉಂಟಾಯಿತು. ಅವರ ಅಭಿಮಾನಿಗಳು ಪೋಟೋ ತೆಗೆಸಿಕೊಳ್ಳ ಮುಗಿಬಿದ್ದರು. ಶ್ರೀವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಉದ್ಘಾಟನೆಗೆ ಹೆಚ್ಚಾಗಿ ಗ್ರಾಹಕರಿಗೆ ಆಹ್ವಾನ ನೀಡಿದ್ದರಿಂದ ಮಳಿಗೆ ತುಂಬ ಗ್ರಾಹಕರು ತುಂಬಿದ್ದರು. ಉದ್ಘಾಟನೆ ಅಂಗವಾಗಿ ಅನೇಕ ಆರ್‌ಗಳನ್ನು ನೀಡಿದ್ದು, ಗ್ರಾಹಕರು ಈ ವೇಳೆ ಬೆಳ್ಳಿ, ಚಿನ್ನ ಖರೀದಿಗೆ ಮುಂದಾದರು.