ಅಪಘಾತದಲ್ಲಿ ಗಾಯಗೊಂಡಿದ್ದವರು ಚೇತರಿಕೆ

Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟ-ಯಳಂದೂರು ಮಾರ್ಗದ ಗವಿಬೋರೆ ಹತ್ತಿರ ಖಾಸಗಿ ಬಸ್ ಉರುಳಿಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದ 30ಕ್ಕೂ ಜನರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಶನಿವಾರ ಬಸ್ ಅಪಘಾತದಲ್ಲಿ ನಂಜನಗೂಡು ತಾಲೂಕಿನ ಹಗಿನವಾಳು, ಬಾಗೂರು ಸೇರಿದಂತೆ ವಿವಿಧ ಗ್ರಾಮಗಳ ಮುದ್ದಶೆಟ್ಟಿ, ಪುಟ್ಟರಾಜಮ್ಮ, ಸಿದ್ದಮ್ಮ, ಮಹದೇವಮ್ಮ, ಸಿದ್ದಶೆಟ್ಟಿ, ಮಹದೇವಶೆಟ್ಟಿ, ಮಹದೇವಮ್ಮ, ಸಿದ್ದಮ್ಮ, ಚೈತ್ರಾ ಸೇರಿದಂತೆ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ತುರ್ತು ವಾಹನಗಳ ಮೂಲಕ ಗಾಯಾಳುಗಳನ್ನು ಯಳಂದೂರು ಪಟ್ಟಣದ ಸರ್ಕಾರಿ ಆಸತ್ರೆಯಲ್ಲಿ ಪಥಮ ಚಿಕಿತ್ಸೆ ನೀಡಿ, ಇವರಲ್ಲಿ ಮೂವರನ್ನು ಚಾಮರಾಜನಗರ ಹೊರವಲಯದ ಸಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು.

ಶನಿವಾರವೇ 20ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದು ಸ್ವಗ್ರಾಮಗಳಿಗೆ ತೆರಳಿದ್ದರು. ಯಳಂದೂರು ಆಸ್ಪತ್ರೆಯಲ್ಲಿ ಬೆನ್ನು ನೋವಿಗೆ ಚಿಕಿತ್ಸೆ ಪಡೆದ ಮೂವರು ಭಾನುವಾರ ಆ್ಯಂಬುಲೆನ್ಸ್ ಮೂಲಕ ನಂಜನಗೂಡು ಆಸ್ಪತ್ರೆಗೆ ತೆರಳಿದರು. ಗಾಯಗೊಂಡಿದ್ದ ಎಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಅವರ ಗ್ರಾಮಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net