ಶ್ರದ್ಧಾ ಭಕ್ತಿಯ ಶ್ರೀ ಕುರುಬನಕಟ್ಟೆ ಕಂಡಾಯಗಳ ಉತ್ಸವ

2-KGLPHOTO -1,..
Published on

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಶ್ರೀ ಕುರುಬನಕಟ್ಟೆ ಕಂಡಾಯಗಳ ಉತ್ಸವ ಭಾನುವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಗ್ರಾಮದ ಕುರುಬರ ಬೀದಿಗೆ ಆಗಮಿಸಿದ್ದ ಕಂಡಾಯಗಳನ್ನು ನೀಲಗಾರರು ಭಕ್ತಿ-ಭಾವದಿಂದ ಶುಚಿಗೊಳಿಸಿ ಹೂ, ಹೊಂಬಾಳೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶ್ರೀ ಕುರುಬನಕಟ್ಟೆ ಮಠಾಧ್ಯಕ್ಷ ವರುಣ್ ರಾಜೇ ಅರಸ್ ಅವರು ಶ್ರೀ ಕಂಡಾಯಗಳ ಮರವಣಿಗೆಗೆ ಚಾಲನೆ ನೀಡಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಗ್ರಾಮಕ್ಕೆ ಭೇಟಿ ನೀಡಿ ಕಂಡಾಯಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕುರುಬರ ಬೀದಿಯ ಕುಲಸ್ಥರು ಶಾಸಕರಿಗೆ ಹಾರ, ಶಾಲು ಹಾಕಿ, ಫಲಪುಷ್ಪ ನೀಡಿ ಅಭಿನಂದಿಸಿದರು. ಕಂಡಾಯೋತ್ಸವದ ಅಂಗವಾಗಿ ಗ್ರಾಮದ ಬೀದಿಯಲ್ಲಿ ಹಸಿರು ತೋರಣ, ವಿದ್ಯುತ್ ದೀಪಾಲಂಕರ ಹಾಗೂ ವಿವಿಧ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು. ಮನೆ ಮನೆ ಮುಂದೆ ಬಂದ ಕಂಡಾಯಗಳಿಗೆ ನಿರೇಯರು ಹೂ, ಹಣ್ಣು, ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮಾದೇಶ್, ಉತ್ತಂಬಳ್ಳಿ ಗ್ರಾಮದ ಕುರುಬ ಸಮುದಾಯದ ಯಜಮಾನರಾದ ಚಿಕ್ಕರಾಚೇಗೌಡ, ನಂಜೇಗೌಡ, ಪುಟ್ಟಮಲ್ಲೇಗೌಡ, ರಾಮಚಂದ್ರ, ರಾಚಯ್ಯ, ಸೋಮಣ್ಣ, ಮಹದೇವ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net