ಎಸ್.ನಟರಾಜುಗೆ ಕಸ್ತೂರಿ ಚೇತನ ಪ್ರಶಸ್ತಿ

NATARAJU Photo ()
Published on

ಕೊಳ್ಳೇಗಾಲ: ಪಟ್ಟಣದ ಭೀಮನಗರ ನಿವಾಸಿ, ಬರಹಗಾರ ಎಸ್.ನಟರಾಜು ಅವರು ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ ನೀಡುವ ಕಸ್ತೂರಿ ಚೇತನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಟರಾಜು ಅವರ ಬದುಕಿನ ಅರ್ಥ ಅರಿಯದವರು ಎಂಬ ಕವನಕ್ಕೆ ಪ್ರಶಸ್ತಿ ದೊರೆತಿದೆ.

ಜೂ.9ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯದ ಹಿಂದಿ ಭವನದಲ್ಲಿ (ಜಿಲ್ಲಾ ಪಂಚಾಯತ್ ಎದುರು) ಏರ್ಪಡಿಸಿರುವ ಅಖಿಲ ಕರ್ನಾಟಕ ರಾಜ್ಯಮಟ್ಟದ ಕವಲು ದಾರಿ ಕವನ ಸಂಕಲನ ಬಿಡುಗಡೆ ಹಾಗೂ 31ನೇ ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷ ಹಾಗೂ ಸಾಹಿತಿ ಸುರೇಶ್ ಮಲ್ಲಾಡದ (ಹಾವೇರಿ) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net