ಒಂದು ದಿನದ ಮರಿಯೊಂದಿಗೆ ಕಾಣಿಸಿಕೊಂಡ ಕಾಡಾನೆ

Published on

ಗುಂಡ್ಲುಪೇಟೆ; ತಾಲೂಕಿನ ಬಂಡೀಪುರದಲ್ಲಿ ಶುಕ್ರವಾರ ಜನಿಸಿದ ಮರಿಯೊಂದಿಗೆ ಕಾಡಾನೆಗಳು ಕಾಣಿಸಿಕೊಂಡ ಅಪರೂಪದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.

ಬಂಡೀಪುರ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಶನಿವಾರ ಸಂಜೆ ಒಂದು ದಿನದ ಮರಿಯೊಂದಿಗೆ ಇರುವ ಆನೆಗಳು ಕಾಣಿಸಿಕೊಂಡಿವೆ. ಇಲ್ಲಿನ ಟೈಗರ್ ರಸ್ತೆಯಲ್ಲಿ ಪ್ರಸವ ವೇದನೆ ಅನುಭವಿಸುತ್ತಿದ್ದ ಆನೆ ಸಮೀಪದ ಪೊದೆಯೊಳಗೆ ಮರಿ ಹಾಕಿತ್ತು. ಈ ವೇಳೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಹಾಗೂ ವಾಹನ ಚಾಲಕರು ಇದನ್ನು ಗಮನಿಸಿದ್ದರು. ಇದೀಗ ಅದೇ ಆನೆ ಮತ್ತೊಂದು ಆನೆಯ ಸಹಕಾರದೊಂದಿಗೆ ತನ್ನ ಮರಿಗೆ ಹಾಲು ನೀಡುತ್ತಿದ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net