

ಕೊಳ್ಳೇಗಾಲ: ಕಾರ್ನರ್ ಸ್ಟೋನ್ ಕಾಲೇಜು ಅತಿ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿರುವ ಅತ್ಯುನ್ನತ್ತ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲ ರೋಷನ್ ಪ್ರಿನ್ಸ್ ಹೇಳಿದರು.
ಪಟ್ಟಣದ ಕಾರ್ನರ್ ಸ್ಟೋನ್ ಪಿಯು ಕಾಲೇಜಿನಲ್ಲಿ ಶನಿವಾರ ನೂತನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ನರ್ ಸ್ಟೋನ್ ಕಾಲೇಜು ಶೈಕ್ಷಣಿಕವಾಗಿ ದಿನ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ. ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ನೀಡುತ್ತಿದೆ. ಇದಕ್ಕೆ ಸಾಕ್ಷಿ ಈ ಬಾರಿ ಪ್ರಥಮ ಪಿಯುಸಿಗೆ 100 ಮಕ್ಕಳು ದಾಖಲಾಗಿರುವುದು ಎಂದರು.
ಕಾರ್ನರ್ ಸ್ಟೋನ್ ಕಾಲೇಜಿನ ಅಧ್ಯಕ್ಷ ರೂಬನ್ ಮೊಸೆಸ್ ಮಾತನಾಡಿ, ಕೊಳ್ಳೇಗಾಲದಲ್ಲಿ ಬಡ ವಿದ್ಯಾ ರ್ಥಿಗಳಿಗೆ ಅನುಕೂಲವಾಗಲೆಂದು ಆಮೇರಿಕಾದಿಂದ ಆಗಮಿಸಿ ಕಾರ್ನರ್ ಸ್ಟೋನ್ ಕಾಲೇಜನ್ನು ತೆರೆದಿದ್ದೇನೆ. ಇದರ ಸದುಪಯೋಗವನ್ನು ಪಟ್ಟಣ ಸೇರಿದಂತೆ ಗ್ರಾಮೀದ ಭಾಗದ ಹೆಚ್ಚು ಜನರು ಬಳಸಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಕ್ರೀಡಾ ಸಂಚಾಲಕ ಆಲ್ವಿನ್ ಪ್ರಶಾಂತ್, ಮಲ್ಲೇಶ್ ಹಾಗೂ ಉಪನ್ಯಾಸಕ ವೃಂದ ಸೇರಿದಂತೆ ವಿಧ್ಯಾರ್ಥಿಗಳು ಮತ್ತು ಪಾಲಕರಿದ್ದರು.